ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಂದಿನಿಂದ ಬಿಬಿಎಂಪಿ ಗುಂಡಿಮುಕ್ತ ರಸ್ತೆ ಆರಂಭ

ವರದಿ : ಗಣೇಶ್ ಹೆಗಡೆ

ಬೆಂಗಳೂರು: ಸಿಲಿಕಾನ್ ಸಿಟಿಗೆ ಇರುವ ಗುಂಡಿಗಳ ನಗರ ಎಂಬ ಅಪಖ್ಯಾತಿ ಹೋಗಲಾಡಿಸಲು ಬಿಬಿಎಂಪಿ ತಯಾರಿ ಆರಂಭಿಸಿದೆ.

ನಗರದಲ್ಲಿ ಇನ್ನು 9207 ರಸ್ತೆ ಗುಂಡಿಗಳನ್ನು ಪತ್ತೆ ಹಚ್ಚಲಾಗಿದ್ದು, ಇಂದಿನಿಂದ ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಮಳೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಫಿಕ್ಸ್ ಮೈ ಸ್ಟ್ರೀಟ್ ಆಪ್ ಮೂಲಕ ಸರ್ವೇ ಮಾಡಿರುವ ಬಿಬಿಎಂಪಿ ನಗರದಲ್ಲಿ ಅಪಾಯಕಾರಿ 9207 ಗುಂಡಿಗಳನ್ನು ಪತ್ತೆ ಹಚ್ಚಿದ್ದು ಎಲ್ಲ ಗುಂಡಿಗಳನ್ನು ಮುಚ್ಚಿ ಗುಂಡಿ ಮುಕ್ತ ಬೆಂಗಳೂರು ನಿರ್ಮಿಸುವ ಗುರಿ ಇರಿಸಿಕೊಂಡಿದೆ.

ನಗರದ ಪೂರ್ವ ವಲಯದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿಗಳು ಪತ್ತೆಯಾಗಿರುವುದು ವಿಶೇಷವಾಗಿದೆ. ಅತಿಯಾದ ವಾಹನದಟ್ಟಣೆ ಪ್ರದೇಶ ಎನಿಸಿಕೊಂಡಿರುವ ಪೂರ್ವ ವಲಯದಲ್ಲಿ 2066 ಗುಂಡಿಗಳಿರುವುದು ಪತ್ತೆಯಾಗಿದೆ. ದಾಸರಹಳ್ಳಿ, ಯಲಹಂಕ ಮತ್ತು ಮಹದೇವಪುರ ವಲಯಗಳಲ್ಲಿ ಸಾವಿರಕ್ಕಿಂತ ಕಡಿಮೆ ಗುಂಡಿಗಳು ಪತ್ತೆಯಾಗಿವೆ.

ಈಗಾಗಲೇ ಐದು ವಿಧಾನಸಭಾ ಕ್ಷೇತ್ರಗಳಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಉಳಿದ 22 ಪ್ರದೇಶಗಳಲ್ಲಿರುವ ಗುಂಡಿಗಳನ್ನು ಪಾಲಿಕೆ ವತಿಯಿಂದಲೇ ಮುಚ್ಚಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಫಿಕ್ಸ್ ಮೈ ಸ್ಟ್ರೀಟ್ ಮೂಲಕ ಮಾಹಿತಿ ನೀಡಬಹುದಾಗಿದೆ.

ವಲಯ ಗುಂಡಿಗಳ ವಿವರ

ಬೊಮ್ಮನಹಳ್ಳಿ – 1076

ದಾಸರಹಳ್ಳಿ – 867

ಪೂರ್ವ – 2066

ಮಹದೇವಪುರ – 729

ರ್ಆ ರ್ಆ ನಗರ – 1068

ದಕ್ಷಿಣ – 1414

ಪಶ್ಚಿಮ – 1232

ಯಲಹಂಕ – 755

ಒಟ್ಟು – 9207

( ರಸ್ತೆ ಗುಂಡಿಗಳ ವಿಸ್ಯೂಲ್ ಬಳಕೆ ಬೆಂಗಳೂರು ದಕ್ಷಿಣ ಹಾಗೂ ಯಶವಂತಪುರ ಕ್ಷೇತ್ರದ ವರದಿಗಾರರು ನೀಡಿರುವ ರಸ್ತೆ ಗುಂಡಿ ವಿಸ್ಯೂಲ್ ಬಳಕೆ ಕಡ್ಡಾಯ)

Edited By : Shivu K
Kshetra Samachara

Kshetra Samachara

16/05/2022 10:57 pm

Cinque Terre

3.61 K

Cinque Terre

0

ಸಂಬಂಧಿತ ಸುದ್ದಿ