ಬೆಂಗಳೂರು:ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡಿರುವ ನಮ್ಮ ಮೆಟ್ರೋ ವಿಸ್ತರಣೆ ಕಾರ್ಯ ಮತ್ತಷ್ಟು ಚುರುಕುಗೊಂಡಿದೆ. ಹಲವು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ವೈಟ್‌ಫೀಲ್ಡ್ ಗೂ ಶೀಘ್ರವೇ ಮೆಟ್ರೋ ವಿಸ್ತರಣೆ ಆಗಲಿದೆ. ಮೆಟ್ರೋ ಪ್ರಯಾಣಿಕರಿಗೆ ಸಂಚಾರ ಮತ್ತಷ್ಟು ಸರಳವಾಗಲಿದೆ. 2 ವರ್ಷಗಳಿಂದ ವಿಳಂಬಗೊಂಡಿದ್ದ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್ ನಡುವಿನ ಕಾಮಗಾರಿಯನ್ನು BMRCL ಇದೀಗ ಚುರುಕುಗೊಳಿಸಿದೆ. ಮುಂದಿನ ವರ್ಷ ಮಾರ್ಚ್ನಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೂ ಮೆಟ್ರೋ ಸಂಚಾರ ಪಾರಂಭವಾಗಲಿದೆ.
2020ರಲ್ಲೇ ಮುಗಿಯಬೇಕಿದ್ದ ಕಾಮಗಾರಿ, ಹಲವು ಅಡಚಣೆಯಿಂದ ವಿಳಂಬ ಆಗಿತ್ತು. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗಿನ ನೇರಳೆ ಮಾರ್ಗದ ವಿಸ್ತರಣೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾಮಗಾರಿಗೆ ಇದ್ದ ಎಲ್ಲ ಅಡಚಣೆ ಕ್ಲಿಯರ್ ಆಗಿದ್ದು, ವೈಟ್‌ಫೀಲ್ಡ್ ವರೆಗೂ ಶೇಕಡಾ 99 ರಷ್ಟು ಕಾಮಗಾರಿ ಕಂಪ್ಲೀಟ್ ಆಗಿದೆ. ಮೆಟ್ರೋ ಕಾಮಗಾರಿ ನಡೆಸಲು ಭೂಸ್ವಾಧೀನ ಮತ್ತು ಮರ ಕಟಾವು ಪ್ರಕ್ರಿಯೆಗೆ ಕೊರೊನಾ ಅಡ್ಡಿ ಪಡಿಸಿತ್ತು.
ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಏರಿಯಾದ ತನಕ ಕಾಮಗಾರಿಗೆ ಅಡ್ಡಿಯಾಗುವ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಬೆನ್ನಿಗಾನಹಳ್ಳಿ, ಕೆ.ಆರ್.ಪುರಂ, ಚನ್ನಸಂದ್ರ, ವೈಟ್ ಫೀಲ್ಡ್ ಸೇರಿ 14 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದ್ದು, 2022ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು BMRCL ವ್ಯಕ್ತಪಡಿಸಿದೆ.
Kshetra Samachara
09/05/2022 10:25 pm