ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಣ್ಣ ಮಳೆ ಬಂದ್ರೂ ಕೆರೆಯಂತಾಗುತ್ತೆ ಇಲ್ಲಿನ ರಸ್ತೆಗಳು..

ಕೆಂಗೇರಿ: ಮಳೆ ಬಂತಂದ್ರೆ ಸಾಕು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತೆ. ಹಾಗೇ ಕೆಂಗೇರಿ ಉಪನಗರದ ಹತ್ತಾರು ರಸ್ತೆಗಳಲ್ಲಿ, ಸಣ್ಣ ಪ್ರಮಾಣದ ಮಳೆ ಬಂದ್ರೆ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ತುಂಬಿರುತ್ತೆ. ವಾಹನ ಸವಾರರು ಪರದಾಡುವ ಸ್ಥಿತಿ ಸೃಷ್ಟಿ ಆಗುತ್ತೆ..

ರಸ್ತೆಗಳಲ್ಲಿ ನೀರು ತುಂಬ್ತಾ ಇರೋದು ಒಂದು ಸಮಸ್ಯೆ ಆದ್ರೆ, ಮತ್ತೊಂದು ಕಡೆ ಹಾಸ್ಪಿಟಲ್ ಗಳಿಗೆ ಓಡಾಡಲು ಇದೇ ರಸ್ತೆ ಬಳಸಬೇಕು. ಹಾಗಾಗಿ ತುಂಬಾನೆ ಪ್ರಾಬ್ಲಂ ಎದುರಿಸುತ್ತಾ ಇದ್ದಾರೆ ಇಲ್ಲಿನ ಜನ.. ಇಲ್ಲಿ ಸರಿಯಾದ ಕಾಲುವೆಗಳಿಲ್ಲದೆ, ಮಳೆ‌ನೀರು ಹೋಗುವುದಕ್ಕೆ ಜಾಗವಿಲ್ಲದೆ ರಸ್ತೆಗಳಲ್ಲಿ‌ ನೀರು ತುಂಬಿ ವಾಹನ ಸವಾರರು ಪರದಾಡುತ್ತಿದ್ದಾರೆ..

ಮಳೆ ಬರ್ತಿರೋದ್ರಿಂದ ಇಲ್ಲೆಲ್ಲ ನೀರು ತುಂಬುತ್ತೆ‌ ಅಂತ ಗೊತ್ತಿದ್ರೂ, ಯಾವ ಅಧಿಕಾರಿಯೂ ಇಲ್ಲಿ‌ ತಲೆ ಹಾಕುತ್ತಿಲ್ಲ. ಈ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಳ್ಳುವವರು ಯಾರು? ಸಾರ್ವಜನಿಕರ ಜೀವದ ಜೊತೆ ಆಟವಾಡ್ತಿದ್ದಾರೆ ಎಂಬ ಎಲ್ಲಾ ಮಾಹಿತಿ ಮೇರೆಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ವರದಿಗಾರರು ರಿಯಾಲಿಟಿ ಚೆಕ್ ಮಾಡಲೆಂದು ಹೋದಾಗ್ಲೆ ಗೊತ್ತಾಗಿದ್ದು, ಈ ರಸ್ತೆಗಳ ಹದಗೆಟ್ಟ ಸ್ಥಿತಿಯ ಬಗ್ಗೆ. ಇನ್ನೂ ಈ ಬಗ್ಗೆ ವರದಿಗಾರರು ನಡೆಸಿರುವ ಸಣ್ಣ ವಾಕ್ ಥ್ರೂ ಇದೆ ನೋಡಣ ಬನ್ನಿ..

ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By :
PublicNext

PublicNext

19/04/2022 10:32 pm

Cinque Terre

42.88 K

Cinque Terre

0

ಸಂಬಂಧಿತ ಸುದ್ದಿ