ಕೋಡಿಪಾಳ್ಯ: ಎಲೆಕ್ಷನ್ ಬಂತಂದ್ರೆ ಸಾಕು, ವರ್ಷಗಟ್ಟಲೆ ರಿಪೇರಿಯಾಗದೇ ಇರೋ ರಸ್ತೆಗಳೆಲ್ಲ ರಿಪೇರಿ ಆಗುತ್ತೆ. ಅಷ್ಟೇ ಯಾಕೆ ಚೆನ್ನಾಗಿರೋ ರಸ್ತೆಗಳನ್ನೂ ಕಿತ್ತು, ಮತ್ತೆ ರಿಪೇರಿ ಮಾಡ್ತಾರೆ.. ಹಾಗೇ ಇಲ್ಲೊಂದು ಕಡೆ ಕೂಡಾ ಚೆನ್ನಾಗಿರೋ ರಸ್ತೆಯ ಕಾಮಗಾರಿ ಶುರು ಮಾಡಲಾಗಿದೆ. ಇದ್ರಿಂದ ವಾಹನ ಸಂಚಾರಕ್ಕೆ ತುಂಬಾನೆ ಸಮಸ್ಯೆಯಾಗ್ತಿದ್ದು ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಆ ರಸ್ತೆ ಯಾವುದು ಗೊತ್ತಾ?
ಇದೇ ನೋಡಿ…ಕೆಂಗೇರಿಯ ಕೋಡಿಪಾಳ್ಯದಲ್ಲಿ ಇದು ಮುಖ್ಯ ರಸ್ತೆಯಾಗಿರೋದ್ರಿಂದ ದಿನನಿತ್ಯ ವ್ಯಾಪಾರ ವಹಿವಾಟು ಜೋರಾಗೆ ಇರುತ್ತೆ, ಎಲೆಕ್ಷನ್ ಬಂತು ಅಂತ ಚೆನ್ನಾಗಿರುವ ಈ ರಸ್ತೆ ಕಿತ್ತು, BWSS ನವ್ರು ಕಾಮಾಗಾರಿ ಮಾಡ್ತಿದ್ದಾರೆ..ಇದ್ರಿಂದ ಇಲ್ಲಿನ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.. ಇನ್ನು ವಾಹನ ಸವಾರರ ಕಥೆ ಅಂತೂ ಕೇಳೋ ಹಾಗಿಲ್ಲ. ಹಾಗೇ ಸ್ಕೂಲ್ ಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು ಕೂಡಾ ಪರದಾಡುವಂತಾಗಿದೆ.
ಇದೀಗ ಈ ಕಾಮಗಾರಿ ಕೋಡಿಪಾಳ್ಯ ಮುಖ್ಯರಸ್ತೆಗೆ ತಲುಪಿದೆ.. ಇನ್ನು ಮುಂದೆ ಬಸ್ ಸಂಚಾರವು ಸಹ ಸ್ಥಗಿತವಾಗುತ್ತೆ. ಈ ರಸ್ತೆ ಮುಚ್ಚಿದ್ರೆ, 1 ಕಿಮೀ ನಲ್ಲಿ ತಲುಪುವ ಪ್ರಯಾಣಿಕರು 3 ಕಿಮೀ ಬಳಸಿಕೊಂಡು ಬರಬೇಕಾಗುತ್ತದೆ.. ಒಟ್ಟಿನಲ್ಲಿ ಕೆಂಗೇರಿ ವಾರ್ಡ್ ನ ಈ ಕೋಡಿಪಾಳ್ಯದಲ್ಲಿ ಯಾವಾಗ್ಲೂ ಈ ರಸ್ತೆಯದ್ದೇ ಸಮಸ್ಯೆಯಾಗಿದೆ. ಪ್ರತಿ ಸಲ ಒಂದಿಲ್ಲೊಂದು ಕಾರಣಕ್ಕೆ ರಸ್ತೆಯನ್ನು ಅಗೆಯುತ್ತಲೇ ಇರ್ತಾರೆ. ಈ ಸಮಸ್ಯೆ ಯಾವಾಗ ಬಗೆಹರಿಯುತ್ತೋ ಅನ್ನೋದೇ ಸಾರ್ವಜನಿಕರ ಪ್ರಶ್ನೆಯಾಗಿದೆ.
PublicNext
23/03/2022 02:26 pm