ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ಸ್ವಚ್ಛ ನಗರ ಪಟ್ಟಿಯಲ್ಲಿ 4 ನೇ ಸ್ಥಾನದಿಂದ ಮೊದಲ ಸ್ಥಾನದತ್ತ ದೊಡ್ಡಬಳ್ಳಾಪುರ ನಗರ

ದೊಡ್ಡಬಳ್ಳಾಪುರ : ಕರ್ನಾಟಕ ರಾಜ್ಯದ ಸ್ವಚ್ಚ ನಗರಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ನಗರ 4ನೇ ಸ್ಥಾನವನ್ನ ಪಡೆದಿದ್ದು, ಮೊದಲ ಸ್ಥಾನಕ್ಕೆರುವ ಪ್ರಯತ್ನದಲ್ಲಿರುವ ನಗರಸಭೆ ನಗರದ ಪ್ರತಿಯೊಂದು ಕುಟುಂಬಕ್ಕೂ ಕಸ ಸಂಗ್ರಹಕ್ಕೆ ಡಸ್ಟ್ ಬಿನ್ ವಿತರಣೆ.

ಸ್ವಚ್ಛ ಪರಿಸರ ಸ್ವಚ್ಚ ಆರೋಗ್ಯಕ್ಕೆ ಕಾರಣ, ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಮನೆಯಲ್ಲು ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು, ಸ್ವಚ್ಚ ಸರ್ವೇಕ್ಷಣ ಕಾರ್ಯಕ್ರಮದ ಅಂಗವಾಗಿ ದೊಡ್ಡಬಳ್ಳಾಪುರ ನಗರಸಭೆ ನಗರವಾಸಿಗಳಿಗೆ ಕಸ ಸಂಗ್ರಹ ಮತ್ತು ಕಸ ವಿಲೇವಾರಿಯ ಬಗ್ಗೆಯನ್ನ ಮೂಡಿಸುತ್ತಿದೆ. ಮನೆಗಳಿಂದ ಕಸ ಸಂಗ್ರಹಿಸುವ ಮುನ್ನವೇ ಹಸಿ ಕಸ ಮತ್ತು ಒಣ ಕಸವನ್ನ ಪ್ರತ್ಯೇಕವಾಗಿ ಸಂಗ್ರಹಿಸಿದ್ದಾರೆ ಕಸ ವಿಲೇವಾರಿ ಮಾಡುವುದು ಸುಲಭ, ಇದೇ ಕಾರಣಕ್ಕೆ ನಗರಸಭೆಯಿಂದ ಪ್ರತಿ ಕುಟುಂಬಕ್ಕೂ ಹಸಿ ಮತ್ತು ಒಣ ಕಸ ಸಂಗ್ರಹಿಸಲು ಪ್ರತ್ಯೇಕ ಎರಡು ಡಸ್ಟ್ ಬಿನ್ ಗಳ ವಿತರಣೆಯನ್ನ ಮಾಡಲಾಗುತ್ತಿದೆ.

ರಾಜ್ಯದ ಸ್ವಚ್ಚ ನಗರಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ನಗರಸಭೆ 4 ನೇ ಸ್ಥಾನವನ್ನ ನಡೆದಿದ್ದು, ಇದೀಗ ಮೊದಲ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ ನಗರಸಭೆ ಕಸ ಸಂಗ್ರಹ ಮತ್ತು ಕಸ ವಿಲೇವಾರಿಗೆ ಪ್ರಮುಖ ಆದ್ಯತೆಯನ್ನ ನೀಡಿದೆ. ಮನೆಗಳಿಂದ ಸಂಗ್ರಹವಾಗುವ ಹಸಿ ಕಸವನ್ನ ಗೊಬ್ಬರವನ್ನಾಗಿ ಮಾಡಿ ರೈತರಿಗೆ ಮಾರಾಟ ಮಾಡುತ್ತಿದೆ ಮತ್ತು ಒಣ ಕಸವನ್ನ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದೆ. ಸ್ವಚ್ಛ ನಗರವನ್ನಾಗಿಸಲು ಜನರು ಸಹ ಬೆಂಬಲ ನೀಡಿದ್ದು ಪ್ರತ್ಯೇಕವಾಗಿ ಹಸಿ ಮತ್ತು ಒಣ ಕಸವನ್ನ ಸಂಗ್ರಹ ಮಾಡುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/02/2022 04:37 pm

Cinque Terre

892

Cinque Terre

0

ಸಂಬಂಧಿತ ಸುದ್ದಿ