ಬೆಂಗಳೂರು: 10 ವರ್ಷಗಳ ಹಿಂದೆ ಇಂಟರ್‌ಲಾಕಿಂಗ್ ಸಿಸ್ಟಮ್ ಬಳಸಿಕೊಂಡು ರಾ.ಹೆ. 4ರ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರವರೆಗೆ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಈ ವೇಳೆ ಒಂದು ಪಿಲ್ಲರ್‌ನಿಂದ ಮತ್ತೊಂದು ಪಿಲ್ಲರ್ ನಡುವಿನ ಸ್ಲಾಬ್ಸ್ ಬಿಗಿಗೊಳಿಸಲು ಅಳವಡಿಸುವ ರೋಪ್ ಅಂದ್ರೆ ಕಬ್ಬಿಣದ ವೈರ್‌ಗಳಲ್ಲಿ ಒಂದು ವೈರ್ ಸಡಿಲವಾಗಿದ್ದು, ದುರಸ್ತಿಗೆ ರಾ.ಹೆ. ಪ್ರಾಧಿಕಾರ ಒಂದು ವಾರದ ಸಮಯವಕಾಶ ತೆಗೆದುಕೊಂಡಿತ್ತು. ಆದ್ರೆ, ತಿಂಗಳಾದ್ರೂ ಸರಿ ಪಡಿಸದ ಕಾರಣ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಹೌದು. ಫ್ಲೈಓವರ್ ದುರಸ್ತಿ ಕಾಮಗಾರಿ ವಿಳಂಬದಿಂದಾಗಿ ವಾಹನ ಸಂಚಾರ ದುಸ್ತರವಾಗಿದೆ. ಕೇವಲ 10 ನಿಮಿಷದಲ್ಲಿ ಕ್ರಮಿಸೋ ರಸ್ತೆಯಲ್ಲಿ ಈಗ ವಾಹನ ಆಮೆಗತಿಯಲ್ಲಿಯೇ ಗಂಟೆಗಟ್ಟಲೆ ಸಾಗಬೇಕಾಗಿದೆ! ಈ ಮಾರ್ಗ 20 ಜಿಲ್ಲೆಗೆ ಸಂಪರ್ಕಿಸೋ ಹೆದ್ದಾರಿಯಾಗಿದ್ದು, ಪ್ರತಿದಿನ 50ರಿಂದ 60 ಸಾವಿರ ವಾಹನಗಳು ಸಂಚರಿಸುತ್ತವೆ. ಮೇಲ್ಸೇತುವೆ ಬಂದ್ ಆಗಿರುವುದರಿಂದ ಕೆಳಗಡೆ ಸರ್ವೀಸ್ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಿದೆ.
ಟ್ರಾಫಿಕ್ ನಿರ್ವಹಿಸಿ ಪೀಣ್ಯ ಸಂಚಾರಿ ಪೊಲೀಸರು ಹೈರಾಣಾಗುತ್ತಿದ್ದಾರೆ. ಪೀಣ್ಯದ 100 ಪೊಲೀಸರ ಜೊತೆಗೆ ಪಕ್ಕದ ಸ್ಟೇಷನ್ ಗಳಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಫ್ಲೈಓವರ್ ನಿರ್ಮಾಣವಾಗಿ 15 ವರ್ಷವಷ್ಟೇ ಆಗಿದೆ. 15 ವರ್ಷಕ್ಕೇ ಹೀಗಾದ್ರೆ ಕೊಟ್ಟಿರೋ 100 ವರ್ಷಗಳ ಗ್ಯಾರಂಟಿ ಏನಾಗಬೇಕು. ಈ ಉಸ್ತುವಾರಿ ವಹಿಸಿಕೊಂಡಿರುವ ಸಂಸ್ಥೆ ಏನು ಮಾಡುತ್ತಿದೆ. ದುರಸ್ತಿ ಕಾರ್ಯಕ್ಕೆ ಒಂದು ವಾರ ಅಂದವರು, ನಂತ್ರ 15 ದಿನ ಅಂದ್ರು. ಈಗ ತಿಂಗಳೇ ಕಳೆಯುತ್ತಾ ಬಂದಿದೆ. ಆದ್ರೂ NHAI ಅಧಿಕಾರಿಗಳಿಗೆ ಈ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ!
PublicNext
17/01/2022 09:58 pm