ಬಿಬಿಎಂಪಿ ಎಲೆಕ್ಷನ್ ಮುಂದೂಡಿಕೆಯಿಂದ ಯಾರಿಗೆ ಲಾಭವೋ ಗೊತ್ತಿಲ್ಲ. ಆದರೆ, ಈ ಪುಟ್ಟ ವಾರ್ಡ್ ಜನತೆಗೆ ಮಾತ್ರ ಸಾಕಷ್ಟು ಲಾಸ್ ಆಗ್ತಿದೆ. ಜನಪ್ರತಿನಿಧಿ ಇಲ್ಲದೆ ಕಷ್ಟ ಹೇಳಿಕೊಳ್ಳಲಾಗದೆ ಅಭಿವೃದ್ಧಿ ಕಾರ್ಯದಲ್ಲಿ ನಿರ್ವಹಣೆ ಕೊರತೆ ಎದುರಿಸುತ್ತಿವೆ. ಯಾವ ವಾರ್ಡ್ ಅಂತೀರಾ ನೀವೇ ನೋಡಿ ಬನ್ನಿ...
ಹೀಗೆ ಕಸದ ಸಮಸ್ಯೆ, ಕುಡಿಯುವ ನೀರಿನ ತೊಂದರೆ ಸಹಿತ ಪ್ರಗತಿ ವರ್ಕ್ ಬಗ್ಗೆ ಉಭಯ ಪಕ್ಷದವರ ಆರೋಪ - ಸಮರ್ಥನೆ ಕೇಳಿದ್ರಿ. ವಿಪರ್ಯಾಸ ಅಂತಂದ್ರೆ ಸಮಸ್ಯೆಗಳು ಬೆಟ್ಟದಷ್ಟಿವೆ. ಪಾರ್ಕ್, ಒಂದೆರಡು ದೇವಸ್ಥಾನ, ನಾಲ್ಕಾರು ಗಲ್ಲಿ ರಸ್ತೆ. ಇವಿಷ್ಟೇ ಹೊಂದಿದ ಚಿಕ್ಕ ವಾರ್ಡ್. ಆದರೆ, ಮತ ದಾರರು ಮಾತ್ರ ಅರ್ಧ ಲಕ್ಷದಷ್ಟು.
ಹೌದು...ನಾವು ಇವತ್ತು ಅವಲೋಕಿಸುತ್ತಿರುವ ರಾಜಧಾನಿಯ ವಾರ್ಡ್ ಮಹಾಲಕ್ಷ್ಮಿಪುರ. ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರದ ಪುಟ್ಟ ವಾರ್ಡ್ ನಲ್ಲಿ ಜನಸಂಖ್ಯೆ 49 ಸಾವಿರ! ಇಲ್ಲಿ ಜನಪ್ರತಿನಿಧಿಗಳ ಆಯ್ಕೆಯನ್ನು ಒಕ್ಕಲಿಗ ಸಮುದಾಯ ನಿರ್ಣಯಿಸುತ್ತೆ. ತಮಿಳಿಯನ್ಸ್ ಮತದಾರರ ಪ್ರಮಾಣ ಕೂಡ ಹೆಚ್ಚಾಗಿದೆ. ನಾಗಪುರ ಹಾಗೂ ಶಂಕರಮಠ ವಾರ್ಡ್ ಮಧ್ಯೆ ಇರುವ ಮಹಾಲಕ್ಷ್ಮಿಪುರದ ವಿಶೇಷತೆ ಎಂದರೆ ಪಂಚಮುಖಿ ಗಣಪತಿ ದೇವಸ್ಥಾನ.
ಇನ್ನು ವಾರ್ಡ್ ನಲ್ಲಿ ಮುಖ್ಯವಾಗಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಆಂಜನೇಯ ಸ್ವಾಮಿ ಪಾರ್ಕ್ , ಅಲ್ಲಿನ ಕೋತಿಗಳು, ಬಾತುಕೋಳಿ ತಾಣ, ಮಹಾಲಕ್ಷ್ಮಿ ಲೇ ಔಟ್ ಬಸ್ ನಿಲ್ದಾಣದಲ್ಲಿ ಕೆಟ್ಟು ಹೋದ ಗಡಿಯಾರ, ಜಯಚಾಮ ರಾಜೇಂ ದ್ರ ಒಡೆಯರ್ ಪ್ರತಿಮೆಯ ಮಾಸಿದ ಬಣ್ಣ ಹೀಗೆ ಹಲವು ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ನಿರ್ವಹಣೆಯಿಲ್ಲದೆ ಪಾಳು ಬೀಳ್ತಿವೆ. ಕಸ ಸಮಸ್ಯೆ, 2 ವರ್ಷದಿಂದ ಜಲಮಂಡಳಿ ಪೈಪ್ ಲೈನ್ ಅಳವಡಿಕೆ ನನೆಗುದಿಗೆ ಬಿದ್ದಿದೆ.
ತಮ್ಮ 5 ವರ್ಷದ ಅಧಿಕಾರ ಅವಧಿಯಲ್ಲಿ ಎಸ್. ಕೇಶವಮೂರ್ತಿ ಅವರು ಗಣೇಶ್ ಬ್ಲಾಕ್, ಸರಸ್ವತಿಪುರಂ, ಮುನೇಶ್ವರ್ ಬ್ಲಾಕ್ ಜೆ.ಸಿ. ನಗರ ಭಾಗದಲ್ಲಿ ಬೋರ್ ವೆಲ್ ನೀರಿನ ಸೌಲಭ್ಯ, ಗರುಡಾ ಲಾಂಛನ, ಶಂಕರ್ ನಗರ ರಸ್ತೆ ಅಗಲೀಕರಣ, ಗೆಳೆಯರ ಬಳಗ, ವಾಸವಿ ದೇವಸ್ಥಾನ ರಸ್ತೆಗಳ ಡಾಂಬರೀಕರಣ, ಆಂಜನೇಯ ಸ್ವಾಮಿ ಹಾಗೂ ಶ್ರೀ ಶಿವಕುಮಾರ ಸ್ವಾಮಿ ಉದ್ಯಾನವನಕ್ಕೆ ವಿಶೇಷ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸಿದ್ದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಚಿಕ್ಕ ವಾರ್ಡ್ ನಲ್ಲಿ ಮತದಾರರು ಹೆಚ್ಚಾಗಿದ್ರೂ ಅಭಿವೃದ್ಧಿ ಸಾಕಷ್ಟು ಆಗಬೇಕಿದೆ. ಮುಖ್ಯವಾಗಿ ಒಂದೇ ಒಂದು ಸರ್ಕಾರಿ ಶಾಲೆ ಇಲ್ಲದಿರೋದು ದೌರ್ಭಾಗ್ಯವೇ ಸರಿ.
PublicNext
18/03/2022 07:42 pm