ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ವಾತಂತ್ರ್ಯ ಅಮೃತೋತ್ಸವ ಸಂಭ್ರಮ; ಸರ್ಕಾರಿ ಶಾಲೆಯಾಯ್ತು ಕಲಾಚಿತ್ರ ಧಾಮ!

ಬೆಂಗಳೂರು: ಖಾಸಗಿ‌ ಶಾಲೆಗಿಂತಲೂ ಸರ್ಕಾರಿ ಶಾಲೆ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದನ್ನು ಇಂದು ಕ್ಯಾಂಪಸ್ ಆಂಡ್ ಕಮ್ಯೂನಿಟಿ ತಂಡ ʼಸ್ಕೂಲ್ ಬೆಲ್ʼ ಎಂಬ ಕಾರ್ಯಕ್ರಮದ ಮೂಲಕ ತೋರಿಸಿ ಕೊಟ್ಟಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮರಸೂರು ಸರ್ಕಾರಿ ಶಾಲೆಯಲ್ಲಿ ವಿವಿಧ ಖಾಸಗಿ ಕಾಲೇಜಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಶಾಲೆ ಕಟ್ಟಡ, ಕಾಂಪೌಂಡ್ ಮೇಲೆ ವಿಭಿನ್ನ ಕಲಾಚಿತ್ರಗಳನ್ನು ರಚಿಸಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೂ ವಿಶೇಷ ಕೊಡುಗೆ ನೀಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಸಹಿತ ಹಲವು ಕಡೆ 200ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ʼಕ್ಯಾಂಪಸ್ ಟು ಕಮ್ಯೂನಿಟಿʼ ಯುವಕರ ತಂಡ ಪಣ ತೊಟ್ಟಿದೆ. 2018ರ ಸೆಪ್ಟೆಂಬರ್ ನಲ್ಲಿ ಶುರುವಾದ ಈ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ‌ ವಿದ್ಯಾರ್ಥಿಗಳು ಕೆಲಸ ಮಾಡಿದ್ದಾರೆ ಹಾಗೂ ಸರ್ಕಾರಿ ಶಾಲೆ ಉಳಿಸಿ, ಬೆಳೆಸಬೇಕೆಂದು ಶ್ರಮ ಪಡುತ್ತಿದ್ದಾರೆ.

ಮರಸೂರು ಭಾಗದಲ್ಲಿ 2 ದಿನಗಳಿಂದಲೂ ವಿದ್ಯಾರ್ಥಿಗಳು ಕಲಾಚಿತ್ರ ಬಿಡಿಸುತ್ತಿದ್ದು, ಇದೇ ರೀತಿ ಇನ್ನು ಹಲವು ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ಚಿತ್ರನಟರೂ ಆಗಮಿಸಿ ಕಲಾಕೃತಿಗಳನ್ನು ವೀಕ್ಷಿಸಿ ತಾವೂ ಚಿತ್ರ ಬಿಡಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿಯೂ ಮಕ್ಕಳು ಖಾಸಗಿ ಶಾಲೆ ಮಕ್ಕಳಂತೆ ಕಲಿಯಬೇಕು. ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕೆಂಬುದು ಪ್ರಮುಖ‌ ಆಶಯ. ಜೊತೆಗೆ ಸರಕಾರಿ‌ ಶಾಲೆಗಳನ್ನು ಮುಚ್ಚಬಾರದೆಂಬ ಮುಖ್ಯ ಉದ್ದೇಶವೂ ಇದೆ. ಈ ಸೇವಾ ಕೈಂಕರ್ಯಕ್ಕೆ ಸ್ಥಳೀಯ ಮುಖಂಡರು ಸಹ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್

Edited By :
PublicNext

PublicNext

03/06/2022 09:39 pm

Cinque Terre

41.25 K

Cinque Terre

0

ಸಂಬಂಧಿತ ಸುದ್ದಿ