ಬೆಂಗಳೂರು: ರಾಜ್ಯದಲ್ಲಿ ಪಿಎಫ್ ಐ ಕಚೇರಿ ಮೇಲಿನ ದಾಳಿ ಬೆನ್ನಲ್ಲೇ ಬಂಧಿತರ ವಿಚಾರಣೆ ಕೂಡ ಮುಂದುವರೆದಿದ್ದು, ಬಂಧನವಾಗಿದ್ದ 15 ಮಂದಿ ಆರೋಪಿಗಳನ್ನು ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ವೇಳೆ ಕೋರ್ಟ್ ಮುಂದೆ ಆರೋಪಿಗಳ ಮನೆಯವರು, ಬಂಧಿತರ ಕೈ ಹಿಡಿದು ದುಃಖತಪ್ತರಾಗುತ್ತಿದ್ದ ದೃಶ್ಯ ಕಂಡು ಬಂತು. ಇನ್ನು, ಈಗಾಗ್ಲೇ ಆರೋಪಿಗಳ ಮೊಬೈಲ್ ರೀಟ್ರಿವ್ ನಲ್ಲಿ ಮಹತ್ವದ ಅಂಶಗಳು ಪತ್ತೆಯಾಗಿದ್ದು, ವೀರಪ್ಪನ್ ಅಡಗಿದ್ದ ಸತ್ಯಮಂಗಲ ಕಾಡಿನಲ್ಲಿ ಯುವಕರಿಗೆ ಪಿಎಫ್ ಐ ತರಬೇತಿ ನೀಡಿರೋದಕ್ಕೆ ಕೆಲ ಫೋಟೋ ಸಾಕ್ಷಿಗಳು ಪತ್ತೆಯಾಗಿವೆ!
ಮೊದಲು ಧರ್ಮದ ಹೆಸರಲ್ಲಿ ಯುವಕರನ್ನು ಸೆಳೆದು ಸಂಘಟನೆಗೆ ಸೇರಿಸಿಕೊಳ್ತಿದ್ದ ಮುಖಂಡರು, ನಂತರ ಯುವಕರಿಗೆ ದೈಹಿಕ ತರಬೇತಿ ಜೊತೆಗೆ ಸಂಘಟನೆಯ ಧ್ಯೋಯೋದ್ದೇಶಗಳನ್ನು ತಿಳಿಸಿ ತರಬೇತಿ ನೀಡಿರುವ ಬಗ್ಗೆ ಪೊಲೀಸ್ರಿಗೆ ಮಾಹಿತಿ ಲಭಿಸಿದೆ. ಸದ್ಯ, ಈ ಮಾಹಿತಿ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
03/10/2022 05:40 pm