ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಅಣ್ಣೇಶ್ವರ ಗ್ರಾಮ ಪಂಚಾಯ್ತಿ ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ತರುವ ಪಂಚಾಯ್ತಿ. ಅಧಿಕಾರ ದುರುಪಯೋಗ ಮಾಡಿಸಿಕೊಂಡು 2013ರಿಂದ 2015ರ ವರೆಗೆ ಈ ಗ್ರಾಪಂ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರ ಕೋಟ್ಯಂತರ ರೂ. ಅವ್ಯವಹಾರ ಇದೀಗ ಸಾಬೀತಾಗಿದೆ.
ಲೋಕಾಯುಕ್ತ ತನಿಖೆಯಂತೆ ಪಂಚಾಯತ್ ರಾಜ್ ಇಲಾಖೆಯ ಅಧೀನ ಅಪರ ಕಾರ್ಯದರ್ಶಿ, ಅಣ್ಣೇಶ್ವರದ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಅವರ ಸದಸ್ಯತ್ವವನ್ನು ಅಮಾನತು ಮಾಡಿದ್ದಾರೆ. ಜೊತೆಗೆ 6 ವರ್ಷ ಯಾವುದೇ ಚುನಾವಣೆಲಿ ಸ್ಪರ್ಧಿಸದಂತೆಯೂ ಆದೇಶಿಸಿದ್ದಾರೆ.
ಈ ಎಲ್ಲಾ ವಿಷಯ ಕುರಿತು ದೇವನಹಳ್ಳಿ ಏರ್ ಪೋರ್ಟ್ ಗೆ ಹೊಂದಿಕೊಂಡಿರುವ ಅಣ್ಣೇಶ್ವರ ಪಂಚಾಯ್ತಿ ಬಳಿಯಿಂದ ನಮ್ಮ ಹಿರಿಯ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ನಿಮಗಾಗಿ...
PublicNext
01/06/2022 08:51 pm