ಬೆಂಗಳೂರು: ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಎಲ್ಲಾ ತಿಂಡಿ ತಿನುಸುಗಳ ಬೆಲೆ ಹೆಚ್ಚಳ ಮಾಡುತ್ತೇವೆ ಎಂದು ಸಭೆ ಕೂಡಿದ್ದರು. ಆದರೆ ಸಭೆಯಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ.
ಹೌದು. ನಗರದ ಬ್ಯಾಚುಲರ್ಸ್ ಗಳಿಗೆ ಅನ್ನ ಹಾಕೋದೆ ಹೋಟೆಲ್‌ಗಳು. ಇನ್ನು ಫ್ಯಾಮಿಲಿಗಳು ಸಹ ವಾರಕೊಂದು ಬಾರಿ ಹೋಟೆಲ್‌ಗಳಿಗೆ ಹೋಗಿ ಊಟ ಮಾಡಿ ಆ ದಿನವನ್ನ ಎಂಜಾಯ್ ಮಾಡ್ತಾರೆ. ಹೀಗಾಗಿ ಇಂತವರಿಗೆಲ್ಲ ಇದು ಸಂತಸದ ವಿಷಯ ಅಂತಾನೆ ಹೇಳಬಹುದು. ಹೋಟೆಲ್ ಮಾಲೀಕರೆಲ್ಲರೂ ಸೇರಿ ಮಹತ್ವದ ತೀರ್ಮಾನ ಹೊರಹಾಕಿದ್ದಾರೆ.
ಕೋವಿಡ್ ಹಿನ್ನಲೆ ಲಾಸ್ ಆಗಿದ್ದ ಹೋಟೆಲ್‌ಗಳು 4 ತಿಂಗಳ ಹಿಂದೆಯೇ ದರ ಪರಿಷ್ಕರಣೆ ಮಾಡಿದ್ದರು. ಹೀಗಾಗಿ ಈ ಬಾರಿ ದರ ಹೆಚ್ಚಳ ಮಾಡೋದು ಬೇಡ ಎಂದು ಡಿಸೈಡ್ ಮಾಡಿದ್ದಾರಂತೆ. ಇನ್ನೂ 2 ತಿಂಗಳವರೆಗೆ ಹೋಟೆಲ್ ಮಾಲೀಕರು ದರ ಹೆಚ್ಚಳ ಮಾಡಲ್ಲ. ಮುಂದಿನ ದಿನಗಳಲ್ಲಿ ಮೀಟಿಂಗ್ ಮಾಡಿ ಹೆಚ್ಚಳ ಮಾಡುವುದಾಗಿ ಕೃಷ್ಣಾ, ನಿಸರ್ಗ ಗ್ರಾಂಡ್ ಮಾಲೀಕರು ತಿಳಿಸಿದ್ದಾರೆ.
PublicNext
11/04/2022 06:18 pm