ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಲೇಶ್ವರ: ಸೀರೆ ಉಟ್ಟ ನಾರಿಯರ ಓಟ

ಬೆಂಗಳೂರು: ತನೈರಾ ಸಂಸ್ಥೆಯು ಭಾನುವಾರ ಬೆಳಿಗ್ಗೆ ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದ 3 ಕಿ.ಮೀ ಉದ್ದದ 'ಸೀರೆ ಉಟ್ಟ ನಾರಿಯರ ಓಟದ ಸ್ಪರ್ಧೆ'ಗೆ (ರನ್ ವಿತ್ ಸ್ಯಾರಿ) 18ನೇ ಅಡ್ಡರಸ್ತೆಯ ಮೈದಾನದಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಸಾವಿರಾರು ನಾರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಚಿವ ಸಿ ಎನ್ ಅಶ್ವತ್ಥ ನಾರಾಯಣ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯದ ಗುಟ್ಟನ್ನು ಅರಿತರೆ ಬದುಕಿನ ಗುಟ್ಟನ್ನೇ ತಿಳಿಯಬಹುದು.ದೇಸೀ ಉಡುಪಿನಲ್ಲಿ ಕೂಡ ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸಬಹುದು. ಇಂತಹ ಚಟುವಟಿಕೆ ಗಳಿಂದ ಮಹಿಳೆಯರಿಗೂ ಖುಷಿ ಸಿಗುತ್ತದೆ ಎಂದು ನುಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೈಹಿಕ ಶಿಕ್ಷಣ ಮತ್ತು ಯೋಗಕ್ಷೇಮಕ್ಕೂ ಆದ್ಯತೆ ಕೊಡಲಾಗಿದೆ. ಸದೃಢ ಆರೋಗ್ಯದಿಂದ ಸದೃಢ ಭಾರತವನ್ನು ನಿರ್ಮಿಸಬಹುದು ಎಂದು ಅವರು ನುಡಿದರು. ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಮತ್ತು ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಇದ್ದರು.

Edited By : PublicNext Desk
Kshetra Samachara

Kshetra Samachara

18/09/2022 10:59 am

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ