ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಾರತೀಯ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ದವಸ, ಧಾನ್ಯಗಳ ವಿತರಣೆ

ವರದಿ- ಬಲರಾಮ್ ವಿ

ಬೆಂಗಳೂರು: ಮಳೆಯಿಂದಾಗಿ ತೊಂದರೆಗೊಳಗಾದ ರಾಮನಗರ ಹಾಗೂ ಚನ್ನಪಟ್ಟಣದ ನೆರೆ ಸಂತ್ರಸ್ತರಿಗೆ ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದಿಂದ ಭಾರತೀಯ ಸೇವಾ ಸಮಿತಿ ಕಾರ್ಯಕರ್ತರು ದವಸ ಧಾನ್ಯಗಳು, ಬಟ್ಟೆ, ಕಂಬಳಿ ಹಾಗೂ ಔಷಧೀಯ ಕಿಟ್‌ಗಳನ್ನು ವಿತರಣೆಗೆ ಮುಂದಾಗಿದ್ದಾರೆ.

ಬಳಿಕ ಮಾತನಾಡಿದ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಹೂಡಿ ರಾಮಚಂದ್ರ ಅವರು, ತೀವ್ರ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾದ ರಾಮನಗರ ಹಾಗೂ ಚನ್ನಪಟ್ಟಣದ ಸಾವಿರಾರು ಬಡತನ ಕುಟುಂಬಗಳಿಗೆ ಆಹಾರ ಧಾನ್ಯ, ಬಟ್ಟೆ, ಚಾಪೆ, ಔಷಧಿ ಸೇರಿದಂತೆ ಕಂಬಳಿಯನ್ನು ವಿತರಿಸಲಾಗುವುದು ಎಂದರು.

ಜನರ ಸಂಕಷ್ಟಕ್ಕೆ ನೆರವಾಗಲು ಭಾರತೀಯ ಸೇವಾ ಸೇವಾ ಯಾವಾಗಲೂ ಸಿದ್ಧವಾಗಿರುತ್ತದೆ. ಮಹದೇವಪುರ ಕ್ಷೇತ್ರದ ಬೆಳ್ಳಂದೂರು, ಮುನೆಕೊಳ್ಳಲ್, ಯಮಲೂರು ಭಾಗದಲ್ಲಿ ಕೂಡಾ ನೆರೆ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಸೇವಾ ಸಮಿತಿಯಿಂದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಸಲಾಗಿದೆ ಎಂದು ಹೇಳಿದರು.

Edited By : Somashekar
PublicNext

PublicNext

08/09/2022 04:18 pm

Cinque Terre

29.02 K

Cinque Terre

0

ಸಂಬಂಧಿತ ಸುದ್ದಿ