ಬೆಂಗಳೂರು: ರೈಲು ಬರುವ ಮುನ್ನ ಹಳಿ ಮೇಲೆ ಬಿದ್ದ ಪ್ರಯಾಣಿಕನನ್ನು ಕೂದಲೆಳೆ ಅಂತರದಲ್ಲಿ ಆರ್‌ಪಿಎಫ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ರೈಲ್ವೆ ಹಳಿ ದಾಟಲು ಹೋಗಿ ಕಾಲು ಜಾರಿ ಬಿದ್ದವನನ್ನು ಆರ್‌ಪಿಎಫ್ ಸಿಬ್ಬಂದಿ ಪ್ರದೀಪ್ ಮತ್ತು ಎಎಸ್ಐ ರವಿ ಜಿಡಿ ರಕ್ಷಿಸಿದ್ದಾರೆ.
ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನನ್ನ ರಕ್ಷಿಸಿದ ಕೆಲವೇ ಸೆಕೆಂಡುಗಳಲ್ಲಿ ಸೂಪರ್ ಫಾಸ್ಟ್ ಶತಾಬ್ದಿ ಎಕ್ಸ್ಪ್ರೆಸ್ ಬಂದಿದೆ.ಇವೆಲ್ಲ ದೃಶ್ಯ ಪ್ಲಾಟ್ ಫಾರ್ಮ್ ನಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಮೈ ಜುಂ ಎನಿಸುವ ಈ ದೃಶ್ಯಗಳು ಸೆರೆಯಾಗಿದೆ. ಜೀವ ಉಳಿಸಿದ ಆರ್‌ಪಿಎಫ್ ಸಿಬ್ಬಂದಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
20/07/2022 07:58 pm