ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬ್ಯಾಂಕಗಳಲ್ಲಿ ಕನ್ನಡ ಬಳಕೆಯಾಗಬೇಕು ಕಸಾಪ ಒತ್ತಾಯ

ಬೆಂಗಳೂರು: ಬ್ಯಾಂಕಗಳಲ್ಲಿ ಕನ್ನಡ ಬಳಕೆಯಾಗಬೇಕು ಎಂಬ ವಿಚಾರವಾಗಿ ಮೂರನೇ ಸುತ್ತಿನ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ನಡೆಸಲಾಯಿತು

ಸಭೆಯ ಅಧ್ಯಕ್ಷತೆಯನ್ನ ವಹಿಸಿದ್ದ ತಾಲೂಕು ವಿಶೇಷ ತಹಶೀಲ್ದಾರ್ ವೆಂಕಟಚಲಪತಿ ಮಾತನಾಡಿ ಬ್ಯಾಂಕುಗಳಲ್ಲಿ ಮೂರೂ ಭಾಷೆಗಳನ್ನ ಬಳಸಬೇಕೆಂದು ಸರ್ಕಾರಗಳು ಇರುತ್ತವೆ. ಅದನ್ನ ಕಡ್ಡಾಯವಾಗಿ ಬ್ಯಾಂಕುಗಳು ಪಾಲಿಸಬೇಕು ಎಂದು ಹೇಳಿದರು ಇಲ್ಲಿನ ನೆಲ ಜಲ ಭಾಷೆ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಿ ಬ್ಯಾಂಕಿನ ಸಿಬ್ಬಂದಿಗೆ ಅನ್ನವನ್ನು ನೀಡುತ್ತಿದೆ ಇಂತಹ ಋಣವನ್ನ ತೀರಿಸುವಂತಹ ಕರ್ತವ್ಯ ಬ್ಯಾಂಕಿನ ಸಿಬ್ಬಂದಿ ಮೇಲಿದೆ ಎಂದು ಹೇಳಿದರು

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಬ್ಯಾಂಕುಗಳಲ್ಲಿ ಕನ್ನಡ ಬೆಳೆದರೆ ರಾಜ್ಯದಲ್ಲಿ ಕನ್ನಡ ಉದ್ಧಾರವಾದಂತೆ ಸರಿ ಬರೀ ಕಾನೂನುಗಳಲ್ಲಿ ಕನ್ನಡವನ್ನು ಉದ್ಧಾರ ಮಾಡಲು ಆಗುವುದಿಲ್ಲ ಕನ್ನಡ ಬೆಳೆಸುವ ಮನಸ್ಸುಗಳು ಇದ್ದರೆ ಮಾತ್ರ ಕನ್ನಡ ಬೆಳೆಯಲು ಸಾಧ್ಯ ಬ್ಯಾಂಕಿನ ಸಿಬ್ಬಂದಿ ಹೊರ ರಾಜ್ಯಗಳಿಂದ ಬಂದು ಕನ್ನಡವನ್ನ ಕಲಿಯದೇ ಇರುವುದು ದುರಾದೃಷ್ಟದ ಸಂಗತಿಯಾಗಿದೆ ಎಂದು ನೋವನ್ನು ವ್ಯಕ್ತಪಡಿಸಿದ್ದರು.

Edited By : PublicNext Desk
Kshetra Samachara

Kshetra Samachara

13/07/2022 09:42 pm

Cinque Terre

476

Cinque Terre

0

ಸಂಬಂಧಿತ ಸುದ್ದಿ