ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಮಿಳುನಾಡಿನ ವೃದ್ಧೆ ಮಡಿಲಿಗೆ ಮಗಳನ್ನು ಸೇರಿಸಿದ ಪುಲಕೇಶಿ ನಗರ ಪೊಲೀಸ್ರು

ಬೆಂಗಳೂರು:ಪುಲಕೇಶಿ ನಗರ ಪೊಲೀಸ್ರು ತಮಿಳುನಾಡಿನ ತಾಯಿ ಮಗಳನ್ನ ಒಂದು‌ ಮಾಡಿ ಮಾನವೀಯತೆ ಮೆರೆದಿದ್ದಾರೆ. ತಮಿಳುನಾಡಿನಿಂದ ಮಗಳನ್ನ ಹುಡುಕಿಕೊಂಡು ಬಂದ ವೃದ್ದೆಯನ್ನ ಮಗಳ ಬಳಿ ಸೇರಿಸಿ ಹೊಯ್ಸಳ ಸಿಬ್ಬಂದಿ ಹೃದಯವೈಶಾಲ್ಯ ಮೆರೆದಿದ್ದಾರೆ.

ತಮಿಳುನಾಡಿನಿಂದ ಮಗಳನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ವೃದ್ದೆ ತಮಿಳುನಾಡಿನಲ್ಲಿ ಮೊಬೈಲ್ ಬಿಟ್ಟು ಮಗಳನ್ನ ಹುಡುಕಿಕೊಂಡು ಬಂದಿದ್ರು.ಮಗಳ ಹೆಸರು ಬಿಟ್ಟು ಬೇರೇನು ಗೊತ್ತಿಲ್ಲದೆ ಪುಲಿಕೇಶಿನಗರದಲ್ಲಿ ಹುಡುಕಾಡುತ್ತಿದ್ರು ಭಾಷೆ ಗೊತ್ತಿಲ್ಲದೆ ಮಗಳನ್ನ ಹುಡುಕಾಡ್ತಿದ್ದ ವೃದ್ದೆಯನ್ನ ಹೋಯ್ಸಳ ಸಿಬ್ಬಂದಿ ಮಾತಾಡಿಸಿದ್ರು. ಭಾಷೆ ಬರಸೆ ಪರದಾಡುತ್ತಿದ್ದ ವೃದ್ಧೆಯನ್ನ ಸ್ಟೇಷನ್ ಗೆ ಕರೆತಂದು‌ಸಂತೈಸಿದ್ರು.‌

ನಂತರ ನಂತರ ವೃದ್ದೆಯ ಮಗಳನ್ನ ಸ್ಥಳೀಯರ ಸಹಾಯದಿಂದ ಸಂಪರ್ಕಿಸಿ ತಾಯಿಯನ್ನ ಒಪ್ಪಿಸಿದ್ದಾರೆ.ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಮೆಚ್ಚುಗೆ‌ ವ್ಯಕ್ತಪಡಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/06/2022 08:25 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ