ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನ್ನ,ನೀರು ಸಿಗದೆ ಸತ್ತ ಭಿಕ್ಷುಕ.. ಬೀದಿ ನಾಯಿಗೆ ಆಹಾರವಾದ

ದೊಡ್ಡಬಳ್ಳಾಪುರ : ಅನ್ನ,ನೀರು ಸಿಗದೆ ಬಳಲಿದ ಭಿಕ್ಷುಕನೊಬ್ಬ ಕಸದ ರಾಶಿಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಭಿಕ್ಷುಕ ಸತ್ತ ಮೂರು ದಿನದ ನಂತರ ಶವ ಪತ್ತೆಯಾಗಿದ್ದು, ಮೃತ ದೇಹ ಬೀದಿ ನಾಯಿಗಳಿಗೆ ಆಹಾರವಾಗಿದೆ.

ಹೌದು ದೊಡ್ಡಬಳ್ಳಾಪುರ ನಗರದ ಹೊರಭಾಗದ ಚಿಕ್ಕಬಳ್ಳಾಪುರ ರಸ್ತೆ ನಂದಿಮೋರಿ ಬಳಿಯ ಖಾಲಿ ಸೈಟ್ ಒಂದರ ಕಸದ ರಾಶಿಯಲ್ಲಿ ಶವ ಪತ್ತೆಯಾಗಿದೆ.

ಸತ್ತು ಮೂರು ದಿನಗಳ ಬಳಿಕ ವಾಸನೆ ಬಂದ ನಂತರ ಶವ ಪತ್ತೆಯಾಗಿದೆ, ಸುಮಾರು 65 ವರ್ಷದ ವೃದ್ದನ ಶವದ ಗುರುತು ಪತ್ತೆಯಾಗಿಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ಚಿಂದಿ ಆಯುತ್ತಾ ಭಿಕ್ಷಾಟನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತದ್ದನೆಂದು ಸ್ಥಳೀಯರ ಹೇಳಿದ್ದಾರೆ.

ಇನ್ನು ದಿಕ್ಕುದೆಸೆ ಇಲ್ಲದ ಆತ ಆಹಾರ ಸಿಗದೆ ನಿತ್ರಾಣಗೊಂಡು ಕಸದ ರಾಶಿಯಲ್ಲಿ ಪ್ರಾಣ ಬಿಟ್ಟಿದ್ದಾನೆ, ಶವ ವಾಸನೆ ಬಂದ ನಂತರ ಪಕ್ಕದಲ್ಲಿರುವ ಗ್ಯಾರೇಜ್ ನವರು ಬಂದು ನೋಡುವಷ್ಟರಲ್ಲಿ ಮೃತದೇಹವನ್ನ ಬೀದಿನಾಯಿಗಳು ಕಚ್ಚಿ ತಿಂದಿವೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

06/04/2022 10:40 am

Cinque Terre

31.14 K

Cinque Terre

0

ಸಂಬಂಧಿತ ಸುದ್ದಿ