ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನ ರಕ್ಷಿಸಿದ ಅಗ್ನಿಶಾಮಕ ದಳ

ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಯಸಂದ್ರ ಕೆರೆಯಿಂದ ಗಟ್ಟಹಳ್ಳಿ ಕೆರೆಗೆ ಹೋಗುವ ರಾಜಕಾಲುವೆಯಲ್ಲಿ ನೀರು ಪಾಲಾಗಿದ್ದ ಇಬ್ಬರನ್ನು ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ.

ಬಟ್ಟೆ ತೊಳಿಯಲು ಹೋಗಿದ್ದ ಆನೇಕಲ್ ಮೂಲದ ನಾಗರಾಜು (39)ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದರು. ಇವರನ್ನು ರಕ್ಷಣೆ ಮಾಡಲು ಹೋಗಿದ್ದ ಮಳವಳ್ಳಿ ಮೂಲದ ಶಶಿಕುಮಾರ್ (32) ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ತಕ್ಷಣವೇ ಕೆಲ ಸ್ಥಳೀಯರು ಶಶಿಕುಮಾರ್‌ನನ್ನ ರಕ್ಷಣೆ ಮಾಡಿದ್ದಾರೆ. ಆದರೆ ನಾಗರಾಜುನನ್ನು ರಕ್ಷಣೆ ಮಾಡಲು ಸಾಧ್ಯವಾಗದಿದ್ದಾಗ ಅಗ್ನಿಶಾಮಕ ಸಿಬ್ಬಂದಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷವೇ ಸ್ಥಳಕ್ಕೆ ದೌಡಾಯಿಸಿದ ಎಲೆಕ್ಟ್ರಾನ್ ಸಿಟಿ ಅಗ್ನಿಶಾಮಕ ಸಿಬ್ಬಂದಿ ನಾಗರಾಜು ಅವರನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್

ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By :
PublicNext

PublicNext

04/04/2022 12:17 pm

Cinque Terre

19.2 K

Cinque Terre

0

ಸಂಬಂಧಿತ ಸುದ್ದಿ