ನೆಲಮಂಗಲ: ಬೈಕ್ ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೂದಿಹಾಳ್ ಗೇಟ್ ಬಳಿ ಸಂಭವಿಸಿದೆ. ಆದರೆ ಮೃತ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿರೋದು ವಿಶೇಷ.
ಮೃತ ಯುವಕನ ಹೆಸರು ನೆಲಮಂಗಲ ತಾಲೂಕಿನ ಕುಲುವನಹಳ್ಳಿಯ ಅಭೀಷೇಕ್ (19) ಎಂದೇ ಗುರುತಿಸಲಾಗಿದೆ. ಆದರೆ
ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿಯೇ ಮೃತಟ್ಟಿದ್ದಾನೆ.ಕಾಲೇಜಿಗೆ ತೆರಳುವಾಗ ಮೃತಪಟ್ಟ ಅಭಿಷೇಕ್, ರಮೇಶ್ ಹಾಗೂ ಭಾಗ್ಯಮ್ಮ ದಂಪತಿಗಳ ಏಕೈಕ ಪುತ್ರ ಆಗಿದ್ದಾನೆ.
ಚಿಕ್ಕವಯಸ್ಸಿನ ಈ ಹುಡುಗನ ಕಣ್ಣುಗಳನ್ನ ಈಗಾಗಲೇ ರಾಜಕುಮಾರ್ ನೇತ್ರದಾನ ಕೇಂದ್ರ ಸ್ವೀಕರಿಸಿದೆ.ದೇಹದ ಅಂಗಾಗಳನ್ನ ದಾನ ಮಾಡಲು ಈಗಾಗಲೇ ಪೋಷಕರು ನಿರ್ಧರಿಸಿದ್ದಾರೆ.ನೆಲಮಂಗಲದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
PublicNext
12/01/2022 05:58 pm