ನೆಲಮಂಗಲ: ದ್ವಿಚಕ್ರ ವಾಹನಕ್ಕೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಹಿಂಬದಿ ಕುಳಿತಿದ್ದ ಮಹಿಳೆ ಮೇಲೆ ಕಂಟೇನರ್ ಲಾರಿ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆ ನೆಲಮಂಗಲ ತಾಲ್ಲೂಕು ಬೂದಿಹಾಳ್ ಗೇಟ್ ಬಳಿ ನೆಡೆದಿದೆ.
ಮೂಲತಃ ತ್ಯಾಮಗೊಂಡ್ಲು ಹೋಬಳಿ ಮಾವಿನಕುಂಟೆ ನಿವಾಸಿ ಮಂಜುಳ (42) ಮೃತ ದುರ್ದೈವಿಯಾಗಿದ್ದು, ಗಂಭೀರ ಗಾಯಗೊಂಡ ಗಾಯಾಳು ವೆಂಕಟರಾಮಯ್ಯಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲದಿಂದ ಬೂದಿಹಾಳ್ ಗೇಟ್ ಕಡೆಗೆ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಂಟೇನರ್ ವಾಹನ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಆದರೆ ಘಟನೆ ಬಳಿಕ ಗಾಯಾಳುಗಳ ಸ್ಥಿತಿ ಏನೆಂದು ಕನಿಷ್ಠ ಮಾನವೀಯತೆಗಾದ್ರು ವಾಹನ ನಿಲ್ಲಸಿದೇ ಕಂಟೇನರ್ ವಾಹನ ಸಹಿತ ಚಾಲಕ ಪರಾರಿಯಾಗಿದ್ದ. ಬಳಿಕ ಕ್ಯಾತಸಂದ್ರ ಬಳಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/08/2022 11:51 am