ಬೆಂಗಳೂರು: ಬೆಂಗಳೂರಿನಲ್ಲಿ ಉರಿಬಿಸಿಲ ಜೊತೆ ಬಿಸಿಗಾಳಿಯ ಆತಂಕ ಶುರುವಾಗಿದೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯಾದ್ಯಂತ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ. ಪೌಷ್ಟಿಕಾಂಶದ ಕೊರತೆ ಇದ್ದವರಿಗೆ ಇದರಿಂದ ಹೆಚ್ಚಿನ ಪರಿಣಾಮ ಬೀರಲಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿರುವುದರಿಂದ ಅನೇಕ ಕಾಯಿಲೆಗಳ ಭೀತಿ ಜನರನ್ನು ಕಾಡುತ್ತಿದೆ. ತಾಪಮಾನ ಹೆಚ್ಚಾದಂತೆ ಜನರಿಗೆ ಕೈಕಾಲು ನೋವು, ತಲೆನೋವು, ಶೀತ, ಗಂಟಲು ನೋವು, ಕೆಮ್ಮು ಸೇರಿದಂತೆ ಹಲವು ರೋಗ ಕಾಣಿಸುವ ಸಾಧ್ಯತೆ ಇದೆ. ಸದ್ಯ ರಾಜಧಾನಿ ಬೆಂಗಳೂರಿನಲ್ಲಿ 36.7 ಡಿಗ್ರಿ ತಾಪಮಾನ ದಾಖಲಾಗಿದೆ..
ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರ ಸಲಹೆ
- ಹೆಚ್ಚು ನೀರು ಕುದಿಸಿ ಹರಿಸಿ ಕುಡಿಯಬೇಕು.
- ಗಂಜಿ, ಮಜ್ಜಿಗೆ, ಎಳೆನೀರು, ನಿಂಬೆ ರಸದತಂಹ ತಂಪು ಪಾನೀಯ ಸೇವನೆ ಉತ್ತಮ.
- ತಾಜಾ ಹಣ್ಣು ತರಕಾರಿ ಮತ್ತು ಸೌತೆಕಾಯಿ ಸೇರಿದಂತೆ ಕಲ್ಲಂಗಡಿ,ಕಿತ್ತಳೆ ಇತ್ಯಾದಿ ಸೇವನೆ ಮಾಡಬೇಕು.
- ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ.
- ಮಾಂಸ, ಮಸಲೆ ಪಾದರ್ಥಗಳ ಮಿತ ಬಳಕೆ.
- ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರ ಇರಬೇಕು.
- ಸುಡುವ ಬಿಸಿಲಿನಲ್ಲಿ ಓಡಾಟ ನಿಲ್ಲಿಸಬೇಕು.
- ಹೊರ ಹೋದಾಗ ಛತ್ರಿ, ಕೂಲಿಂಗ್ ಗ್ಲಾಸ್ ಬಳಸಬೇಕು.
- ಚರ್ಮದ ರಕ್ಷಣೆಗೆ ಹತ್ತಿ ಬಟ್ಟೆ ಧರಿಸಬೇಕು.
- ಚರ್ಮಕ್ಕೆ ಸಾನ್ ಸ್ಕೀನ್ ಲೋಷನ್ ಬಳಸಿ.
- ಧೂಳು ಮತ್ತು ಬಿಸಿಲಿನಿಂದ ಕಣ್ಣಿನ ರಕ್ಷಣೆಗಾಗಿ ಕೂಲಿಂಗ್ ಗ್ಲಾಸ್ ಧರಿಸುವುದು.
- ಬೆಚ್ಚಗಿನ ಅಥವಾ ತಣ್ಣೀರಿನ ಸ್ಥಾನ ಮಾಡಬೇಕು.
PublicNext
30/04/2022 09:48 pm