ವರದಿ - ಗಣೇಶ್ ಹೆಗಡೆ
ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ರಾಜ್ಯ ಸಹಜ ಸ್ಥಿತಿಯಲ್ಲಿ ಇದ್ದು ಮತ್ತೆ ಲಾಕ್ ಡೌನ್ ಆದರೆ ಹೇಗೆ ಎಂಬ ಚಿಂತೆ ಜನರಲ್ಲಿ ಕಾಡುತ್ತಿದೆ. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವನ್ನು ಸರ್ಕಾರ ಮಾಡಿದೆ. ಆದರೆ ಜನರು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ಬಿಬಿಎಂಪಿ ಕೆಲವು ದಿನಗಳ ಕಾಲಾವಕಾಶ ನೀಡಿದೆ.ಮೇ 2 ರ ನಂತರ ಮಾಸ್ಕ್ ಹಾಕದ ಜನರ ಮೇಲೆ ದಂಡ ಪ್ರಯೋಗಿಸಲು ಬಿಬಿಎಂಪಿ ಮುಂದಾಗಿದೆ.
ಹೌದು. ಮೇ ಮೊದಲ ವಾರದಲ್ಲಿ ಮಾಸ್ಕ್ ಹಾಕದ ಜನರಿಗೆ 250 ರೂ. ದಂಡ ಹಾಕಲು ಪಾಲಿಕೆ ನಿರ್ಧರಿಸಿದೆ. ಈ ಬಗ್ಗೆ ಮಾರ್ಷಲ್, ಆರೋಗ್ಯ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಲಾಗಿದ್ದು, ಹಿಂದಿನ ರೂಲ್ಸ್ ಜಾರಿಗೆ ಬಿಬಿಎಂಪಿ ನಿರ್ಧರಿಸಿದೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ರವರು, ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಹೀಗಾಗಿ ಜನರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇಲ್ಲವಾದಲ್ಲಿ ಹಿಂದಿನ ಸರ್ಕಾರದ ಆದೇಶ ಪಾಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಮಾಸ್ಕ್ ಹಾಕಿದ್ರೆ ಮಾತ್ರ ಬಿಎಂಟಿಸಿ ಬಸ್ ಹತ್ತಲು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಬಿಎಂಟಿಸಿಯಿಂದ ಡ್ರೈವರ್ ಹಾಗೂ ಕಂಡಕ್ಟರ್‌ಗೆ ಸೂಚನೆ ನೀಡಲಾಗಿದೆ.
PublicNext
28/04/2022 07:53 pm