ಬೆಂಗಳೂರು:ಇಂದು ರಾತ್ರಿ 10 ಗಂಟೆಯಿಂದ ನಗರದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಅನಗತ್ಯ ಓಡಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಇಂದು ರಾತ್ರಿ 10ರಿಂದ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ. ಸರ್ಕಾರದ ಅದೇಶ ಎಲ್ಲರೂ ಗೌರವಿಸಬೇಕು. ಅಗತ್ಯ ವಸ್ತು ಖರೀದಿ ನೆಪದಲ್ಲಿ ಅನಗತ್ಯ ಓಡಾಡುವುದು ಸರಿಯಲ್ಲ. ಹೊಟೇಲ್ ಪಾರ್ಸೆಲ್ ತೆಗೆದುಕೊಳ್ಳಬಹುದು.`ವಾಣಿಜ್ಯ ಮಳಿಗೆ ಮಾಲೀಕರು ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತೇವೆ. ತುರ್ತು ಪ್ರಯಾಣ, ಸೇವೆ ಹೊರತುಪಡಿಸಿ ಬೇರೆ ವಾಹನ ಓಡಾಡಿದರೆ ಸೀಜ್ ಮಾಡುತ್ತೇವೆ. ನಗರದ ಆಯ್ದ ಕಡೆ ಪೊಲೀಸರು ನಾಕಾಬಂದಿ ಹಾಕಿ, ತಪಾಸಣೆ ನಡೆಸಲಿದ್ದಾರೆ ಎಂದರು.
ಈ ಬಾರಿ ಪಾಸ್ ಜಾರಿ ಮಾಡುವುದಿಲ್ಲ.ಐಡೆಂಟಿಟಿ ಕಾರ್ಡ್,ಪ್ರಯಾಣ ಟಿಕೆಟ್ ಸೇರಿ ಸೂಕ್ತ ದಾಖಲೆ ನೀಡಿದರೆ ಮಾತ್ರ ಓಡಾಡುವುದಕ್ಕೆ ಅನುಮತಿ ನೀಡಲಾಗುವುದು, ಫ್ಲೈ ಓವರ್ ಬಂದ್ ಮಾಡಲಾಗುವುದು. ಹೆವಿ ರೂಟ್ ಇರುವ ಹೈವೇ ಅನಿವಾರ್ಯತೆ ನೋಡಿ ಬಂದ್ ಮಾಡ್ತೀವಿ. ಕೆಲವೊಂದು ಗೂಡ್ಸ್ ಲಾರಿ, ಎಮರ್ಜೆನ್ಸಿ ವಾಹನಕ್ಕೆ ಅನುವು ಮಾಡಿಕೊಡುತ್ತೇವೆ. ವೀಕೆಂಡ್ ಲಾಕ್ ಡೌನ್ ನಲ್ಲಿ ತಮ್ಮ ಏರಿಯಾ ಬಿಟ್ಟು ಬೇರೆ ಏರಿಯಾಗೆ ಹೋಗುವಂತಿಲ್ಲ. ದಿನಸಿ ನೆಪದಲ್ಲಿ ಬೇರೆ ಬೇರೆಡೆ ತೆರಳಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
PublicNext
07/01/2022 03:25 pm