ಬೊಮ್ಮನಹಳ್ಳಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಕಾರಗೃಹ ಪರಪ್ಪನ ಅಗ್ರಹಾರದಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಇನ್ನು ಯೋಗದಿಂದ ಮನಸ್ಸು ಹಾಗೂ ಶರೀರ, ಆಲೋಚನೆ ಹಾಗೂ ಕ್ರಿಯೆ, ಸಂಯಮ ಹಾಗೂ ಸಾರ್ಥಕತೆ, ಮಾನವ ಹಾಗೂ ನಿಸರ್ಗದ ನಡುವೆ ಸಾಮರಸ್ಯ ಬರುತ್ತೆ ಯೋಗದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
ಯೋಗ ಮತ್ತು ಆರೋಗ್ಯ ಇವೆಲ್ಲವೂ ಸಹ ಕೈದಿಗಳಿಗೆ ಅರಿವಾಗಲಿ ಎನ್ನುವ ಉದ್ದೇಶದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸತತ 52 ವಾರಗಳಿಂದ ಸಂಸ್ಥೆಯ ಬಂದಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಯೋಗಾಭ್ಯಾಸದ ತರಬೇತಿಯನ್ನು ನೀಡಿದೆ. ಇನ್ನು ಕಾರಾಗೃಹದಲ್ಲಿ ಟವರ್-1 ವಿಭಾಗದಲ್ಲಿ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ 500 ವಿಚಾರಣಾ ಕೈದಿಗಳ, ಟವರ್ -2 ವಿಭಾಗದಲ್ಲಿ ಸತ್ಸಂಗ ಸಂಸ್ಥೆಯ ಸಹಯೋಗದಲ್ಲಿ 100 ಸಜಾ ಬಂದಿಗಳು ಹಾಗೂ ಮಹಿಳಾ ವಿಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದಲ್ಲಿ 100 ಮಹಿಳಾ ಬಂದಿಗಳು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಅಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸೃತಿ ಮತ್ತು ಸಮ್ಯಕ್ ಸಮಾಧಿ ಈ ಎಂಟು ಯೋಗಗಳು ಅಭ್ಯಾಸ ಮಾಡಿಸಲಾಯಿತು ಅಲ್ಲದೆ ಅಂತರಂಗ _ ಬಹಿರಂಗ ಶುದ್ದಿಯ ಸಾಧನಗಳನ್ನು ಜೈಲಿನ ಕೈದಿಗಳಿಗೆ ತಿಳಿಸಿಕೊಡಲಾಯಿತು.
Kshetra Samachara
21/06/2022 06:50 pm