ಬೆಂಗಳೂರು: ಮಕ್ಕಳಿಗೆ ಕೊವೀಡ್ ಲಸಿಕೆ ನೀಡುವುದರಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2.81 ಲಕ್ಷ ಮಕ್ಕಳಿಗೆ ಲಸಿಕೆ ನೀಡಬೇಕು. ಆದರೆ ಮಾರ್ಚ್ 16 ಆರಂಭವಾದ ಮಕ್ಕಳ ಲಸಿಕಾ ಕಾರ್ಯಕ್ರಮದಲ್ಲಿ 31,585 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಇನ್ನೊಂದು ವಾರ ಕಾಲಾವಕಾಶ ಇದ್ದು, ಏಪ್ರಿಲ್ 10ರ ಬಳಿಕ ಬೇಸಿಗೆ ರಜೆ ಪ್ರಾರಂಭವಾಗಲಿದೆ. ಹೀಗಾಗಿ ವಾರದಲ್ಲಿ ಬಹುತೇಕ ಮಕ್ಕಳು ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
PublicNext
04/04/2022 08:56 pm