ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತುಕ್ಕು ಹಿಡಿಯುತ್ತಿದೆ ಸೋಂಕು ಸಿಂಪಡಣೆ ವಾಹನ!

ವಿಶೇಷ ವರದಿ: ಗಣೇಶ್ ಹೆಗಡೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ 3ನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಅದರಲ್ಲಿ ಬಹುಪಾಲು ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.

ಈ ನಿಟ್ಟಿನಲ್ಲಿ ನಗರದಲ್ಲಿ ಸೋಂಕು ಹರಡಬಾರದೆಂಬ ಕಾರಣಕ್ಕೆ ಸ್ಯಾನಿಟೈಸರ್ ಸಿಂಪಡಿಸುವುದಾಗಿ ಹೇಳುತ್ತಿದ್ದ ಬಿಬಿಎಂಪಿ ತನ್ನ ಕಾರ್ಯ ಮರೆತಂತಿದೆ! ಬಿಬಿಎಂಪಿ ಜನ ಸುರಕ್ಷೆಗಾಗಿ ತಂದ ಸ್ಯಾನಿಟೈಸರ್ ಯಂತ್ರಗಳ ಬಳಕೆ ಮಾಡದೆ ತುಕ್ಕು ಹಿಡಿದು, ಧೂಳು ತಿನ್ನುವಂತಾಗಿದೆ.

ನಗರದ ಪ್ರಮುಖ ರಸ್ತೆ, ಜನ ಜಂಗುಳಿ ಪ್ರದೇಶ, ಮಾರ್ಕೆಟ್ ಭಾಗದಲ್ಲಿ ಈ ಯಂತ್ರದ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಆದರೆ, ಇರುವ 14 ವಾಹನಗಳಲ್ಲಿ ಕೇವಲ 2 ವಾಹನ ಬಳಕೆ ಆಗುತ್ತಿದೆ! ಎಂ.ಜಿ.ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಉಳಿದ ಬಿಬಿಎಂಪಿ ಪಾರ್ಕಿಂಗ್ ಏರಿಯಾದಲ್ಲಿ ಧೂಳು ಹಿಡಿಯುತ್ತಿವೆ.

Edited By : Nagesh Gaonkar
Kshetra Samachara

Kshetra Samachara

13/01/2022 09:57 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ