ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ 02 ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್-19 ಸೋಂಕು ಪ್ರಕರಣಗಳು ಕಂಡು ಬಂದಿರುವುದರಿಂದ ಯಾವುದೇ ರೀತಿಯ ಊಹಾಪೋಹಗಳಿಗೆ ಭಯ ಪಡದೆ ಶಾಲೆಯ ಆಡಳಿತ ಮಂಡಳಿ ಮತ್ತು ಮಕ್ಕಳ ಪೋಷಕರು ಪಾಲಿಕೆ ಸೂಚಿಸುವ ಈ ಕೆಳಕಂಡ ಕ್ರಮಗಳನ್ನು ಪಾಲಿಸಬೇಕೆಂದು ಕೋರಿದೆ.
ವಿದ್ಯಾಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು
1. ತಮ್ಮ ಸಂಸ್ಥೆಯ ದ್ವಾರದಲ್ಲಿ ಪ್ರತಿ ದಿನ ಬೆಳಿಗ್ಗೆ ಪ್ರಾರಂಭದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ, ಭೋದಕೀಯ ಮತ್ತು ಭೋದಕೇತರ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡುವುದು.
2. ಸಂಸ್ಥೆಯ ಯಾವುದೇ ವಿದ್ಯಾರ್ಥಿಗಳು / ಸಿಬ್ಬಂದಿಗಳಲ್ಲಿ ಕೋವಿಡ್-19 ಖಾಯಿಲೆಯ ಯಾವುದೇ ರೀತಿಯ ಲಕ್ಷಣ ಕಂಡು ಬಂದಲ್ಲಿ ಅಂತಹವರಿಗೆ ತಕ್ಷಣವೇ ಕೋವಿಡ್-19 ಪರೀಕ್ಷೆ ನಡೆಸಿ, ನಂತರ ಫಲಿತಾಂಶ ಬರುವವರೆಗೂ ಪ್ರತ್ಯೇಕವಾಗಿ ಇರಿಸುವುದು.
3. ಸಂಸ್ಥೆಯ ಆವರಣದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡಿರುವುದನ್ನು ಎಲ್ಲಾ ಸಮಯದಲ್ಲೂ ಖಚಿತಪಡಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವುದು ಇತ್ಯಾದಿ ಕೋವಿಡ್-19 ಖಾಯಿಲೆ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು.
4. ಸಂಸ್ಥೆಯ ಆವರಣದಲ್ಲಿ ಮುಖ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು.
5. ಸಂಸ್ಥೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು.
6. ಸಂಸ್ಥೆಯ ಎಲ್ಲಾ ಅರ್ಹ ಭೋದಕೀಯ ಮತ್ತು ಭೋದಕೇತರ ಸಿಬ್ಬಂದಿಗಳು ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು. ಲಸಿಕೆ ಪಡೆಯದ ಯಾವುದೇ ಅರ್ಹ ಸಿಬ್ಬಂದಿ ಇದ್ದಲ್ಲಿ, ಅವರಿಗೆ ಕೂಡಲೇ ಲಸಿಕೆ ಪಡೆಯುವಂತೆ ವ್ಯವಸ್ಥೆ ಮಾಡುವುದು.
7. ಸಂಸ್ಥೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಪಡೆಯುವಂತೆ ಪ್ರೇರೇಪಿಸಿ, ಅಗತ್ಯ ಕ್ರಮ ಕೈಗೊಳ್ಳುವುದು.
ನಾಗರೀಕರು / ಪೋಷಕರು ಅನುಸರಿಸಬೇಕಾದ ಕ್ರಮಗಳು:
1. ಮನೆಯಲ್ಲಿರುವ ಎಲ್ಲಾ ಅರ್ಹ ಸದಸ್ಯರುಗಳು ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು.
2. ಮನೆಯಲ್ಲಿರುವ ಯಾವುದೇ ಸದಸ್ಯರಿಗೆ ಕೋವಿಡ್-19 ಖಾಯಿಲೆಯ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಉಚಿತ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುವುದು.
3. ಮನೆಯಲ್ಲಿರುವ ಎಲ್ಲಾ ಅರ್ಹ ಮಕ್ಕಳು ಕೋವಿಡ್-19 ಲಸಿಕೆ ಪಡೆಯಲು ಪ್ರೇರೇಪಿಸುವುದು.
4. ಮನೆಯಲ್ಲಿರುವ ಶಾಲಾ ವಯಸ್ಸಿನ ಮಕ್ಕಳಲ್ಲಿ ಕೋವಿಡ್-19 ಖಾಯಿಲೆಯ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಉಚಿತ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ಫಲಿತಾಂಶ ಬರುವವರೆಗೂ ಅವರನ್ನು ಶಾಲೆಗೆ ಕಳುಹಿಸದೇ ಪ್ರತ್ಯೇಕವಾಗಿ ಇರಿಸುವುದು.
5. ಮನೆಯಲ್ಲಿರುವ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು.
Kshetra Samachara
15/06/2022 07:16 pm