ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚುಚ್ಚುಮದ್ದು ನೀಡಿದ ಜಾಗದಲ್ಲಿ ಕೊಳೆತ ಮಾಂಸ: ವೈದ್ಯನ ತಪ್ಪಿಗೆ ನೋವು ಅನುಭವಿಸುತ್ತಿರುವ ಯುವಕ

ದೊಡ್ಡಬಳ್ಳಾಪುರ: ಐಐಎಸ್ ಮಾಡುವ ಕನಸು ಹೊಂದಿದ್ದ ಆ ಯುವಕ ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದ. ಮುಖ್ಯ ಪರೀಕ್ಷೆಗೆ ತಯಾರಿ ನಡೆಸ್ತಿದ್ದ. ಆದ್ರೆ ವೈದ್ಯನ ಎಡವಟ್ಟಿನಿಂದ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ.

ದೊಡ್ಡಬಳ್ಳಾಪುರ ನಗರದ ತಿಪ್ಪಾಪುರ ರಸ್ತೆಯ ನಿವಾಸಿ ಗಂಗರಾಜ ಶಿರವಾರ ಪುತ್ರ ಜಿ.ನಾಗೇಂದ್ರ ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಾಂಡೀಸ್ ಖಾಯಿಲೆಯ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವೀರಭದ್ರಪಾಳ್ಯದ ಮನೆಯಲ್ಲೇ ಕ್ಲಿನಿಕ್ ಇಟ್ಟುಕೊಂಡಿರುವ ಡಾ.ಆದಿಮೂರ್ತಿ ಬಳಿ ಚಿಕಿತ್ಸೆಗಾಗಿ ಹೋಗಿದ್ದಾರೆ. ಚುಚ್ಚುಮದ್ದು ನೀಡಿದ ವೈದ್ಯ ಮಾತ್ರೆ ಕೊಟ್ಟು ಕಳಿಸಿದ್ದಾನೆ.

ಆದರೆ, ಇಂಜೆಕ್ಷನ್ ನೀಡಿದ ಜಾಗದಲ್ಲಿ ಊತ ಕಾಣಿಸಿಕೊಂಡಿದೆ. ತಕ್ಷಣ ವೈದ್ಯ ಆದಿಮೂರ್ತಿ ಅವರಿಗೆ ತಿಳಿಸಿದಾಗ, ಏನೂ ಆಗಲ್ಲ, ನೀರು ತುಂಬಿಕೊಂಡಿದೆ ಎಂದು ಹೇಳಿ, ಸಿರೇಂಜ್ ನಲ್ಲಿ‌ ನೀರು ಹೊರತೆಗೆದು ಮತ್ತೊಂದು ಇಂಜೆಕ್ಷನ್ ಕೊಟ್ಟು ಗ್ಲೂಕೋಸ್ ಹಾಕಿದ್ದಾರೆ. ಆದರೆ, ಊತ ಹಾಗೂ ನೋವು ಕಡಿಮೆಯಾಗಿಲ್ಲ.‌

ಗಾಬರಿಯಾದ ಪೋಷಕರು ನಾಗೇಂದ್ರನನ್ನ ಸರ್ಕಾರಿ‌ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಚುಚ್ಚುಮದ್ದು ನೀಡಿದ ಜಾಗದಲ್ಲಿ ಮಾಂಸ ಕೊಳೆತು ದುರ್ಮಾಂಸ ಬೆಳೆದಿತ್ತು. ಗಾಯದ ತೀವ್ರತೆ ಅರಿತ ಸರ್ಕಾರಿ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ದುರ್ಮಾಂಸ ತೆಗೆದಿದ್ದಾರೆ. 11 ದಿನಗಳಿಂದ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಮೊದಲಿನಂತೆ ಆಗಲು ಇನ್ನೂ 15 ದಿನಗಳು ಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮಗನಿಗೆ ಆಗಿರುವ ಸಮಸ್ಯೆ ಬಗ್ಗೆ ಮಾತನಾಡಲು ಆದಿಮೂರ್ತಿ ಬಳಿ ಹೋದಾಗ ಅವರು ಜಾತಿ ನಿಂದನೆ, ಬೆದರಿಕೆ ಹಾಕಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Edited By : Manjunath H D
PublicNext

PublicNext

02/08/2022 04:34 pm

Cinque Terre

22.84 K

Cinque Terre

1

ಸಂಬಂಧಿತ ಸುದ್ದಿ