ಬೆಂಗಳೂರು: ವಿವಿಧ ಸರ್ಕಾರಿ ಸಂಸ್ಥೆಗಳಿಂದ ಕೆರೆ ಒತ್ತುವರಿ ಆಗಿರುವ ವಿಚಾರವಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟೀಕರಣ ನೀಡಿದ್ದಾರೆ. ಸರ್ಕಾರಿ ಸಂಸ್ಥೆಗಳಿಂದಲೇ ಅಕ್ರಮ ಒತ್ತುವರಿಯಾಗಿರೋದು ಬಿಬಿಎಂಪಿ ಒಪ್ಪಿಕೊಂಡಿದೆ.
208 ಕೆರೆಗಳು ನಗರದಲ್ಲಿವೆ. ಇದರಲ್ಲಿ 201 ಕೆರೆಗಳು ಬಿಬಿಎಂಪಿಗೆ ಸೇರಿದೆ. ಬೇರೆ ಬೇರೆ ಸಮಿತಿಯ ವರದಿಯಂತೆ ನಾವು ಕ್ರಮ ತೆಗೆದುಕೊಂಡಿದ್ದೇವೆ . ಅತಿ ಹೆಚ್ಚು ಒತ್ತುವರಿ ಮಾಡಿರೋದು ಬಿಡಿಎ ಅಂತ ಗೊತ್ತಾಗಿದೆ. ಅವರು ಅಧಿಕೃತ ಹಾಗೂ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. ಅವರಿಗೆ ಈ ಬಗ್ಗೆ ಸ್ಪಷ್ಟನೆ ಕೇಳಿ ನಾವು ನೋಟೀಸ್ ಕೊಟ್ಟಿದ್ದೆವು.
ಈಗ ಅವರು ಈ ಬಗ್ಗೆ ನಮಗೆ ಮಾಹಿತಿ ಕೊಟ್ಟಿದ್ದಾರೆ. ಸರ್ಕಾರಿ ಸಂಸ್ಥೆಗಳಿಂದಲೂ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುವುದಾಗಿ ತುಷಾರ್ ಗಿರಿನಾಥ್ ಹೇಳಿದ್ದಾರೆ ಎಂದು ಹೇಳಿದ್ದಾರೆ.
PublicNext
17/09/2022 02:56 pm