ಬೆಂಗಳೂರು : 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೂರ್ವ ವಿಭಾಗ, ಘಟಕ -15 ಕೋರಮಂಗಲದಲ್ಲಿ ಧ್ವಜಾರೋಹಣ ಮಾಡಲಾಯಿತು.ಈ ಸಂಭ್ರಮಾಚರಣೆಯಲ್ಲಿ ಬಿಎಂಟಿಸಿಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು. ಧ್ವಜಾರೋಹಣದ ನಂತರ, 100 ಚಾಲಕರಿಗೆ ಕಳೆದ ವರ್ಷಗಳಲ್ಲಿ ಅವರ ಅಪಘಾತ ಅಮುಕ್ತ ಚಾಲನಾ ಕೌಶಲ್ಯಕ್ಕಾಗಿ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.
ಬೆ. ಮಾ.ಸಾ. ಸಂಸ್ಥೆಯ ರಜತ ಮಹೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರು ಬೆಳ್ಳಿ ಪದಕ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಡ್ರೈವಿಂಗ್ ಅಂದ್ರೆ ಸುಮ್ಮನೆ ಅಲ್ಲ. ಒಂದು ಆಕ್ಸಿಡೆಂಟ್ ಇಲ್ಲದೆ ಕಪ್ಪು ಚುಕ್ಕೆ ಪಡೆದುಕೊಳ್ಳೆದೆ ಇದ್ದ ಚಾಲಕರು ಇವರೆಲ್ಲ. ಹಾಗಾಗಿ ಇವರಿಗೆಲ್ಲ ಬೆಳ್ಳಿ ಪದಕ ಕೊಟ್ಟು ಗೌರವಿಸಿದ್ದು ಸಂತಸದ ವಿಷಯ.
Kshetra Samachara
15/08/2022 09:49 pm