ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇಶಾಭಿಮಾನದಿಂದ ರಾಷ್ಟ್ರಧ್ವಜ ಖರೀದಿಸಿ, ಹಾರಿಸಿ: ಜಿಲ್ಲಾಧಿಕಾರಿ ಆರ್.ಲತಾ

ಬೆಂಗಳೂರು: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರವರೆಗೆ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದೆ. ಇದರ ಪ್ರಯುಕ್ತ ಖಾದಿಯಿಂದ ನೇಯಲ್ಪಟ್ಟ ರಾಷ್ಟ್ರಧ್ವಜ, ಬಟ್ಟೆಯ ರಾಷ್ಟ್ರಧ್ವಜವನ್ನು ದೇಶಾಭಿಮಾನದಿಂದ ಖರೀದಿಸಿ, ಹಾರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ದೇವನಹಳ್ಳಿಯ ವಿಶ್ವನಾಥಪುರ ಗ್ರಾಮ ಪಂಚಾಯ್ತಿಯ "ಜಾಗೃತಿ ಸಂಜೀವಿನಿ ಗ್ರಾಮ ಪಂಚಾಯ್ತಿ ಒಕ್ಕೂಟ"ದ ವತಿಯಿಂದ ರಾಷ್ಟ್ರಧ್ವಜ ಮಾರಾಟ ಮಳಿಗೆನ ಜಿಲ್ಲಾಧಿಕಾರಿ ಆರ್.ಲತಾ ಉದ್ಘಾಟಿಸಿದರು. ಈ ವೇಳೆ ತ್ರಿವರ್ಣಧ್ವಜ ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By : Vijay Kumar
Kshetra Samachara

Kshetra Samachara

11/08/2022 08:25 pm

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ