ವರದಿ-ಗೀತಾಂಜಲಿ
ಬೆಂಗಳೂರು: ನಮ್ಮ ಸರ್ಕಾರ ಬಂದಾಗ ಪ್ರತಿ ವರ್ಷವೂ ಮಳೆಯಾಗುತ್ತದೆ.ಬೇಸಿಗೆಯಲ್ಲೂ ಮಳೆಗಾಲದಂತೆ ಮಳೆಯಾಗಿದೆ.ಇವತ್ತಿಗೆ ಮಳೆ ಸ್ವಲ್ಪ ಕಡಿಮೆಯಾಗಿದೆ.ಬಿಜಾಪುರ, ಉತ್ತರ ಕರ್ನಾಟಕದ ಕಡೆ ಮಳೆಯಾಗುವ ಸಂಭವ ಇದೆ.
ಇಡೀ ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಅನಾಹುತ,ಪ್ರಾಣಹಾನಿಯಾಗಿದೆ.ಜುಲೈ 8 ರಂದು ಸಿಎಂ ಸಭೆ ಮಾಡಿದ್ರು.ಜುಲೈ 15 ರಂದು ಕೂಡ ಸಭೆ ಮಾಡಿದ್ರು.ಒಟ್ಟು ನಾಲ್ಕು ಸಭೆಗಳನ್ನ ಸಿಎಂ ಮಾಡಿದ್ರು.ಒಟ್ಟು 13 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ.ಹಾಸನ, ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ 13 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ.
ನಾಳೆ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಒಟ್ಟು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ 14 ಜಿಲ್ಲೆಗಳಿಗೆ ಪ್ರವಾಸ ಮಾಡುವುದಾಗಿ ವಿಧಾನಸೌಧದಲ್ಲಿ ನಡೆದ ಮಳೆಹಾನಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಆರ್.ಅಶೋಕ್ ಹೇಳಿದ್ದಾರೆ.
PublicNext
08/08/2022 02:20 pm