ವರದಿ- ಗೀತಾಂಜಲಿ
ಬೆಂಗಳೂರು:ಕೇಂದ್ರ ಸರ್ಕಾರ ಸಂಸತ್ ಭವನದ ಮೇಲೆ ಇರೋ ರಾಷ್ಟ್ರ ಲಾಂಛನದಲ್ಲಿ ಬದಲಾವಣೆ ಮಾಡಿದೆ.ಈ ಮೊದಲು ರಾಷ್ಟ್ರ ಲಾಂಛನದಲ್ಲಿ ಸಿಂಹ ಬಾಯಿ ಮುಚ್ಚಿದ ಮಾದರಿಯಲ್ಲಿತ್ತು. ಈಗ ಕೇಂದ್ರ ಸರ್ಕಾರ ಸಿಂಹ ಘರ್ಜಿಸುವ ರೀತಿಯಲ್ಲಿ ಬದಲಾಯಿಸಿ ಲೋಕಾರ್ಪಣೆ ಮಾಡಿದೆ.ಈ ಹಿನ್ನೆಲೆ ಬೆಂಗಳೂರಿನಲ್ಲೂ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳ ಬದಲಾಗಲಿದೆ ಆಗಲಿದೆ.
ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ನಲ್ಲಿರುವ ರಾಷ್ಟ್ರ ಲಾಂಛನದ ಬದಲಾವಣೆಗೂ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ತಿದೆ.ರಾಜ್ಯದಲ್ಲೂ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳ ಮುಖಚರ್ಯೆ ಬದಲಾಯಿಸಲು ತೀರ್ಮಾನ ಮಾಡಲಾಗಿದ್ದು,ಮೊದಲನೇದಾಗಿ ನಗರದ ಅಶೋಕ ಪಿಲ್ಲರ್ ಮೇಲಿರುವ ರಾಷ್ಟ್ರ ಲಾಂಛನ ಬದಲಾವಣೆ ಮಾಡಲಾಗುತ್ತದೆ.ಈ ಬಗ್ಗೆ ಕೇಂದ್ರದಿಂದ ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿಯೇ ಬಿಬಿಎಂಪಿ ಕಾಂಗ್ರೆಸ್ ನಾಯಕ ಅಬ್ದುಲ್ ವಾಜೀದ್ ಆಕ್ರೋಶ ವ್ಯಕ್ತಪಡಿಸಿದ್ದು,
ಪಾರಂಪರಿಕ ಹಳೆ ಕಟ್ಟಡಗಳನ್ನ, ಪಿಲ್ಲರ್ ಗಳನ್ನ ಕೆಡವಿ ತಮಗೆ ಇಷ್ಟವಾಗೋ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
PublicNext
29/07/2022 02:24 pm