ದೊಡ್ಡಬಳ್ಳಾಪುರ : ಮಳೆಯಾರ್ಭಟಕ್ಕೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಳ್ಳ ಹಿಡಿದಿದೆ. ಬಿರುಗಾಳಿ ಹೊಡೆತಕ್ಕೆ ವಸ್ತು ಪ್ರದರ್ಶನ ಮಳಿಗೆಗಳಿಗೆ ಹಾಕಿದ ಪೆಂಡಾಲ್ ಹಾರಿ ಹೋಗಿದೆ, ನೂತನ ಜಿಲ್ಲಾಧಿಕಾರಿ ಕಾರ್ಯಕ್ರಮ ಮಳೆಯ ಆರ್ಭಟಕ್ಕೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆರ್ ಲತಾ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮೊದಲ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇಂದು ದೊಡ್ಡಬಳ್ಳಾಪುರ ತಾಲೂಕಿನ ಮೇಲಿನಜೂಗಾನಹಳ್ಳಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಉದ್ಘಾಟನೆ ಮಾಡಿದರು, ಆದರೆ ಕಾರ್ಯಕ್ರಮಕ್ಕೆ ಮಳೆರಾಯ ತನ್ನ ಪ್ರಭಾವ ತೋರಿಸಿದ್ದಾನೆ, ಸುಸೂತ್ರವಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಲು ಬಿಟ್ಟ ಮಳೆರಾಯನ ನಂತರ ತನ್ನ ಪ್ರಭಾವ ತೋರಿದ್ದಾನೆ, ಮಧ್ಯಾಹ್ನನದ ನಂತರ ಬಿರುಗಾಳಿ ಸಮೇತರಾಗಿ ಶುರುವಾದ ಮಳೆ ಕಾರ್ಯಕ್ರಮವನ್ನ ಅಸ್ತವ್ಯಸ್ತ ಮಾಡಿದೆ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳಿಂದ ಹಾಕಲಾಗಿದೆ ವಸ್ತು ಪ್ರದರ್ಶನ ಮಳಿಗೆಗಳ ಪೆಂಡಾಲ್ ಹಾರಿ ಹೋಗಿದೆ, ಮಳಿಗೆಯಲ್ಲಿದ್ದ ವಸ್ತುಗಳನ್ನ ರಕ್ಷಣೆ ಮಾಡಲು ಹರಸಹಾಸ ಪಟ್ಟರು ಆದರೆ ಮಳೆಯ ಆರ್ಭಟಕ್ಕೆ ಪೆಂಡಾಲ್ ಗಳು ನೆಲಕ್ಕುರುಳಿವೆ. ಇದರಿಂದ ಮಳಿಗೆಯಲ್ಲಿದ್ದ ವಸ್ತುಗಳು ನೀರುಪಾರಾಗಿದೆ. ಮಳೆಯಿಂದ ಕಾರ್ಯಕ್ರಮ ಅಸ್ತವ್ಯಸ್ತವಾಗಿದೆ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜಿಲ್ಲಾಧಿಕಾರಿಗಳ ರಾತ್ರಿ ವಾಸ್ತವ್ಯ ರದ್ದಾಗುವ ಸಾಧ್ಯತೆ ಇದೆ.
Kshetra Samachara
16/07/2022 08:12 pm