ವರದಿ - ಗಣೇಶ್ ಹೆಗಡೆ
ಬೆಂಗಳೂರು - ಭಾರೀ ಗೌಪ್ಯತೆ ಕಾಪಾಡಿಕೊಂಡು ಸಿದ್ಧಪಡಿಸಿರುವ ಬಿಬಿಎಂಪಿ ವಾರ್ಡ್ ಮರು ವಿಂಗಡ ಣೆ ಕರಡು ಒಪ್ಪಿ ಆ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿ ಸಿದೆ.
198 ವಾರ್ಡ್‌ಗಳಿಂದ 243 ವಾರ್ಡ್‌ಗಳಿಗೆ ಏರಿಕೆ ಮಾಡಿ ಸಿದ್ಧಪಡಿಸಿರುವ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಅಧಿಕಾರಿಗಳು ಸಲ್ಲಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶೀಲಿಸಿದ ಬಳಿಕ ಸಾರ್ವಜನಿಕ ಆಕ್ಷೇಪಣೆಗೆ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿತ್ತು. 15 ದಿನಗಳ ಕಾಲಾವಕಾಶದ ಬಳಿಕ ತಿದ್ದುಪಡಿ ಕರಡನ್ನು ಸರ್ಕಾರಕ್ಕೆ ಪಾಲಿಕೆ ಸಲ್ಲಿಕೆ ಮಾಡಿತ್ತು. ಅದನ್ನು ಸರ್ಕಾರ ಅಂಗೀಕರಿಸಿದ್ದು, ರಾಜಪತ್ರವನ್ನು ಹೊರಡಿಸಿದೆ.
120ಕ್ಕೂ ಹೆಚ್ಚಿನ ವಾರ್ಡ್‌ಗಳ ಗಡಿ ಬದಲಾಗಿದ್ದು, ಕೆಲವು ವಾರ್ಡ್‌ಗಳು ಹಿಂದಿನ ಸ್ವರೂಪವನ್ನೇ ಕಳೆದುಕೊಂಡಿವೆ. ವಿಶೇಷ ಏನಂದ್ರೆ ಮಹಾಲಾಕ್ಷ್ಮಿ ವಿಧಾನ ಸಭಾ ಕ್ಷೇತ್ರದಲ್ಲಿ ದಿ. ಡಾ.ಪುನೀತ್ ರಾಜ ಕುಮಾರ್ ರವರ ವಾರ್ಡ್ ನಾಮ ಕರಣ ಮಾಡಲಾಗಿದೆ.
ವಾರ್ಡ್‌ಗಳನ್ನು 198ರಿಂದ 243ಕ್ಕೆ ಹೆಚ್ಚಿಸಿ ಜೂನ್ 23ರಂದು ಕರಡು ಪಟ್ಟಿ ಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 2022 ರ ಜುಲೈ 7ರ ವರೆಗೆ ಅವಕಾಶವಿತ್ತು. ಕಡೆಯ 3 ದಿನಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ, ದೂರು, ಸಲಹೆಗಳು ಸಲ್ಲಿಕೆಯಾಗಿತ್ತು.
ಎಲ್ಲ ಆಕ್ಷೇಪಣೆಗಳನ್ನು ಕ್ರೋಡೀಕ ರಿಸುವ ಕಾರ್ಯ ವಿಕಾಸಸೌಧದ ಲ್ಲಿರುವ ನಗರಾಭಿವೃದ್ಧಿ ಕಚೇರಿ ಯಲ್ಲಿ ನಡೆದಿತ್ತು.
PublicNext
14/07/2022 10:22 pm