ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊದಲ ಸುತ್ತಿನ ಗ್ರಾಮಸಭೆಯನ್ನು ಪಿಳ್ಳಪ್ಪ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಆದರೆ, ಬೆರಳೆಣಿಕೆಯಷ್ಟು ಅಧಿಕಾರಿಗಳು ಭಾಗಿಯಾಗಿದ್ದು, ಗ್ರಾಮಸಭೆ ಕಾಟಾಚಾರಕ್ಕಷ್ಟೇ ನಡೆದಿದೆ ಅಂತ ಗ್ರಾಮಸ್ಥರು ಹಾಗೂ ಸದಸ್ಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಇನ್ನು, ಈ ಗ್ರಾಮಸಭೆಯಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳ ಬದಲಿಗೆ ಅವರ ಸಹಾಯಕರು ಮಾತ್ರ ಹಾಜರಾಗಿದ್ದರು. ಈ ಸಹಾಯಕ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲದ್ದರಿಂದ ಗ್ರಾಮಸ್ಥರಿಗೆ ಬೇಕಾದ ಪ್ರಮುಖ ಮಾಹಿತಿ ಸಿಗದೇ ಹೋಯಿತು.
ಈ ಸಂದರ್ಭ ಅಧ್ಯಕ್ಷೆ ಭಾಗ್ಯಮ್ಮ ಜಯಕುಮಾರ್ ಮಾತನಾಡಿ, ಮೊದಲ ಸುತ್ತಿನ ಗ್ರಾಮಸಭೆ ಯಶಸ್ವಿಯಾಗಿ ನಡೆದಿದೆ. ಸಾರ್ವಜನಿಕರ ಕುಂದುಕೊರತೆ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಕೊಟ್ಟಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ನಕಲಿ ಸಹಿ ಬಳಕೆ ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು... ಈ ಬಗ್ಗೆ ನಾವು ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ದೂರನ್ನು ಖುದ್ದಾಗಿ ನೀಡಿದ್ದೇವೆ. ಈಗಾಗಲೇ ಅವರು ತನಿಖೆ ನಡೆಸುತ್ತಿದ್ದಾರೆ
ಎಂದು ತಿಳಿಸಿದರು.
ಗ್ರಾಮಸಭೆಯಲ್ಲಿ 31 ಮಂದಿ ವಿಶೇಷ ಚೇತನರಿಗೆ ಮತ್ತು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಗೌರವಿಸಲಾಯಿತು.
- ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
Kshetra Samachara
11/07/2022 09:18 pm