ಬೆಂಗಳೂರು- ಎರಡು ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ ವೈಟ್ ಟಾಪಿಂಗ್ ಮೂರನೇ ಹಂತದ ಯೋಜನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಚುನಾವಣೆ ಸಮೀಪಿ ಸುತ್ತಿರುವ ಬೆನ್ನಲ್ಲೇ ಹಣಕಾಸು ಇಲಾಖೆ ಸೇರಿ ಹಲವು ಅನು ಮತಿಗಳ ಪ್ರಕ್ರಿಯೆ ಚುರುಕು ಗೊಂಡಿದೆ.
ಹೆಚ್ ಡಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿದ್ದಾಗ 1154 ಕೋಟಿ ರೂ ವೆಚ್ಚದಲ್ಲಿ 89 ರಸ್ತೆ ಗಳನ್ನು ವೈಟ್ ಟಾಪಿಂಗ್ ಮಾಡುವ ಉದ್ದೇಶ ಹೊಂದಲಾಗಿತ್ತು. ಬಿಬಿಎಂಪಿ ಟೆಂಡರ್ ಪ್ರಕ್ರಿಯೆ ಕೂಡಾ ಆರಂಭವಾಗಿತ್ತು. ಆದರೆ ಬಿ.ಎಸ್.ಯಡಿಯೂರಪ್ಪ ಸಿಎಂ ಆದ ಬಳಿಕ ಅನುದಾನ ಹಿಂಪಡೆದಿದ್ದರು.
ಇದೀಗ ಬಸವರಾಜ್ ಬೊಮ್ಮಾಯಿ ರವರು ಮೂರನೇ ಹಂತದ ವೈಟ್ ಟಾಪಿಂಗ್ ಯೋಜನೆಗೆ ಅನುಮತಿ ನೀಡಿದ್ದಾರೆ. ಮೂರನೇ ಹಂತದಲ್ಲಿ ಗುರುತಿಸಿದ ರಸ್ತೆಗಳು ಬಿಇಎಲ್, ಹೆಚ್ ಎಂ ಟಿ ಮುಖ್ಯ ರಸ್ತೆ, ನಾಗರ ಭಾವಿ, ಮಾಗಡಿ ರಸ್ತೆ, ರೈಲ್ವೇ ಪಾರ್ಲಲ್ ರಸ್ತೆ, ಕತ್ರಿಗುಪ್ಪೆ, ನಿಮ್ಹಾ ಮ್ಸ್ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆ.
Kshetra Samachara
04/06/2022 05:30 pm