ಬೆಂಗಳೂರು : ಯಲಹಂಕದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಇಂದು BBMPಯ ಮುಂಗಾರುಮಳೆ ನಿರ್ವಹಣೆಗಾಗಿ ವಲಯ ಕಾರ್ಯಪಡೆಯ ಪರಿಶೀಲನಾ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮುಂಗಾರುಮಳೆ, ಮಳೆಯಿಂದಾಗುವ ಪರಿಣಾಮ, BBMP ಹೇಗೆ ಮಳೆಯ ಸಾಧಕ ಬಾಧಕಗಳ ಬಗ್ಗೆ ಮುನ್ನಡೆಯಬೇಕು ಎಂಬ ವಿಚಾರಗಳ ಬಗ್ಗೆ ಚರ್ಚಿಸಲಾಯ್ತು.
ತೋಟಗಾರಿಕೆ, ಯೋಜನೆ , ಮತ್ತು ಸಾಂಖ್ಯಿಕ ಸಚಿವ ಮುನಿರತ್ನರವರು ಭಾಗವಹಿಸಿದ್ದರು. BDA ಅಧ್ಯಕ್ಷ, ಯಲಹಂಕ ಶಾಸಕ ವಿಶ್ವನಾಥರ ಅಧ್ಯಕ್ಷತೆಲಿ ಸಭೆ ನಡೆಯಿತು. ಯಲಹಂಕ ವಲಯ ಜಂಟಿ ಆಯುಕ್ತರಾದ ಡಾ.ಪೂರ್ಣಿಮಾ ಹಾಗೂ BBMP ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
31/05/2022 08:36 pm