ಬೆಂಗಳೂರು:ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬರೆದಿರುವ ಪತ್ರ ನೋಡಿದ ಪಾಲಿಕೆ ಸಿಬ್ಬಂದಿ ಅಚ್ಚರಿಗೊಳಗಾದ ಘಟನೆ ನಡೆದಿದೆ.
ಪಾಲಿಕೆಯ ಕೌನ್ಸಿಲರ್ ಗಳ ಆಸ್ತಿ ವಿವರ ಸಲ್ಲಿಕೆ ಮಾಡುವಂತೆ ಲೋಕಾಯುಕ್ತ ಸಂಸ್ಥೆ ಬಿಬಿಎಂಪಿ ಗೆ ಕೋರಿದೆ. ಇದರಿಂದ ಅಚ್ಚರಿಗೊಳಗಾದ ಪಾಲಿಕೆ ಸಿಬ್ಬಂದಿ ಕಳೆದ ಒಂದುವರೆ ವರ್ಷದಿಂದ ಆಡಳಿತಾಧಿಕಾರಿ ನೇತೃತ್ವದಲ್ಲಿ ಬಿಬಿಎಂಪಿ ನಡೆಯುತ್ತಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ಇಲ್ಲವೇ ಎಂದು ಪಾಲಿಕೆ ಸಿಬ್ಬಂದಿಗಳು ಪ್ರಶ್ನಿಸಿಕೊಂಡಿದ್ದಾರೆ.
ಇನ್ನೂ ಲೋಕಾಯುಕ್ತ ಕಾಯ್ದೆ ಪ್ರಕಾರ ಜನಪ್ರತಿನಿಧಿಗಳು ಪ್ರತಿವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕು.ವಿವರ ನೀಡದ ಕೌನ್ಸಿಲರ್ ಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಲೋಕಾಯುಕ್ತಕ್ಕೆ ಇದೆ. ಇಲ್ಲದ ಕೌನ್ಸಿಲರ್ ಗಳ ಆಸ್ತಿ ವಿವರ ಸಲ್ಲಿಸೋದು ಹೇಗೆ ಎಂಬ ಪ್ರಶ್ನೆ ಮುಖ್ಯ ಆಯುಕ್ತರ ಕಚೇರಿ ಸಿಬ್ಬಂದಿ ಗಳದ್ದಾಗಿದೆ.
Kshetra Samachara
31/05/2022 10:25 am