ಬೆಂಗಳೂರು: ಹೆಚ್ ಗೊಲ್ಲಹಳ್ಳಿಯಲ್ಲಿ ಪಂಚಾಯಿತಿಯಲ್ಲಿ ಇವತ್ತು ಗ್ರಾಮ ಸಭೆ ಕಾರ್ಯಕ್ರಮ ನಡೆಸಲಾಯಿತು. ವರ್ಷದ ಆರ್ಥಿಕ ಆದಾಯವೆಷ್ಟು? ವೆಚ್ಚವೆಷ್ಟು? ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಅಂತ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಪಿಡಿಓ, ಅಧ್ಯಕ್ಷರಿಗೆ ಜನರು ಪ್ರಶ್ನೆಯನ್ನ ಕೇಳಲಾಗಿದೆ.
ಇನ್ನೂ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಪಶು ಇಲಾಖೆ, ಜಲಜೀವನ ಮಿಷನ್ ಇನ್ನೂ ಮತ್ತಿತ್ತರ ಇಲಾಖೆಗಳು ಪಾಲ್ಗೊಂಡು ಜನರಿಗೆ ಯಾವ ಯಾವ ಇಲಾಖೆಗಳಲ್ಲಿ ಏನೆಲ್ಲಾ ಕಾರ್ಯಕ್ರಮಗಳು ಬರುತ್ತವೆ.. ಅದ್ರಿಂದ ಸದುಪಯೋಗಗಳು ಏನಿವೆ ಅನ್ನೊದರ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
- ಇನ್ನೂ ಕೃಷಿ ಇಲಾಖೆಯಡಿಯಲ್ಲಿ ಏನೆಲ್ಲ ಬರುತ್ತದೆ ನೋಡುವುದಾದ್ರೆ...
ಸಬ್ಸಿಡಿಗಳನ್ನ ತೆಗೆದುಕೊಳ್ಳಬಹುದು.
ಹನಿ ನೀರಾವರಿ ಮಾಡಿಸಿಕೊಳ್ಳ ಬಹುದು.
ಜೇನು ಕೃಷಿ ಮಾಡಬಹುದು. ಮನೆಯಲ್ಲಿ 2 ಬಾಕ್ಸ್ 75 ಪರ್ಸೆಂಟ್ ಸಬ್ಸಿಡಿ.
ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವ ಜೇನು ಕೃಷಿಕರಿಗೆ ಸ್ಟಾಂಡ್, ಬಾಕ್ಸ್, ಗೂಡು, ಟ್ರೇನಿಂಗ್ ಕೊಡುವುದು.
- ಕೃಷಿ ಇಲಾಖೆ ಅನುಕೂಲಗಳು
ಮುಖ್ಯವಾಗಿ ಬಿತ್ತನೆ ಬೀಜಗಳು, ತೊಗರಿ, ಅವರಕಾಳು ತೆಗೆದುಕೊಲಳ್ಳಬಹುದು. ರಾಗಿ ಮತ್ತು ಭತ್ತ ಒಂದು ಎಕರೆಗೆ ಬೆಳೆ ವಿಮೆ ಮಾಡಿದ್ರೆ ಅದಕ್ಕೆ 15-16 ಸಾವಿರ ಕೊಡುತ್ತಾರೆ. ನೋಂದಣಿ ಮಾಡಬೇಕು. 300 ರೂ. ವಿಮೆ ಮಾಡಿಸುವುದರಿಂದ ಪರಿಹಾರ ದೊರೆಯುತ್ತದೆ.
ಪಿ,ಎಮ್ ಕಿಸಾನ್ ಯೋಜನೆ ಬರುತ್ತದೆ.
- ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಅನುಕೂಲಗಳು
ವಾಕ್ಸಿನೇಶನ್ ಪ್ರಿಕಾಷನ್ ಡೋಸ್ ತಪ್ಪಿಸಿಕೊಳ್ಳಬಾರದು. 60 ವರ್ಷ ಮೇಲ್ಪಟ್ಟ ವಯಸ್ಸಿನವರು ಮೊದಲು ಪ್ರಿಕಾಷನ್ ಡೋಸ್ ಪಡೆಯಬಹುದು. ಮಳೆ ಹಿನ್ನಲೆ ಗಂಡಾತರ ಇದೆ. ಅದಕ್ಕೆ ನೀರು ನಿಲ್ಲದಂತೆ ನೀಡ ಗರ್ಭಿಣಿಯರನ್ನ ಅಧಿಕ ರಕ್ತದೊತ್ತಡ, ಕ್ಯಾಟರಾಕ್ ಚಿಕಿತ್ಸೆ ಮಾಡಿಸಿಕೊಳ್ಳಬಹುದು.
- ಪಶು ಇಲಾಖೆಯ ಅನುಕೂಲಗಳು
10 ಜನರಿಗೆ ದೇಸಿ ಕೋಳಿ ಕೊಡಲಾಗುತ್ತದೆ.
10 ಜನರಿಗೆ ಕುರಿ- ಮತ್ತು ಮೇಕೆ ಕೊಡಲಾಗುತ್ತದೆ.
3 ಜನಕ್ಕೆ ಹಂದಿ ಕೊಡಲಾಗುವುದು..
-ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ
ಪ್ರತಿ ಮನೆ ಮನೆಗೆ ಗಂಗೆ ಯೋಜನೆ.
ನಳ ಸಂಪರ್ಕದ ನೀರಿನ ಮೂಲ ಸೌಕರ್ಯ ಕಲ್ಪಿಸುವುದು.
ಕೇಂದ್ರ ಸರ್ಕಾರ ಶುದ್ದ ನೀರಿನ ಘಟಕಕಗಳನ್ನ ಕೊಡುವುದು.
ಇದರಂತೆ ಇನ್ನೂ ಹಲವಾರು ಯೋಜನೆಗಳನ್ನ ತರಲಾಗಿದೆ. ಅದನ್ನ ಜನರು ಸದುಪಯೋಗ ಪಡೆದುಕೊಳ್ಳಬಹು. ಮತ್ತು ಗ್ರಾಮದಲ್ಲಿರುವ ಕುಡಿಯುವ ನೀರಿ ಘಟಕಕ್ಕೆ ಸ್ಮಾರ್ಟ್ ಕಾರ್ಡ್ ನಾ ಕೊಡಲಾಗಿದೆ. ಐದು ರೂ ಕಾಯಿನ್ ಬದಲು ಕಾರ್ಡ್ ಇಟ್ಟು ನೀರಿಡಿದುಕೊಳ್ಳಬಹುದು.
ರಂಜಿತಾ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
28/05/2022 10:35 pm