ವಿಶೇಷ ವರದಿ: ಗಣೇಶ್ ಹೆಗಡೆ
ಬೆಂಗಳೂರು: ಡ್ಯೂಟಿ ಟೈಮ್ ಇರೋದು 10 ಗಂಟೆಗೆ. ಆದರೆ, 11.30 ಆದರೂ ಶೇ.50ರಷ್ಟು ಸಿಬ್ಬಂದಿ ಕಚೇರಿಯಲ್ಲಿ ಇರುವುದಿಲ್ಲ! ಇದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಈ ಸಂಬಂಧ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಯೋಮೆಟ್ರಿಕ್ ಯಂತ್ರ ಕಡ್ಡಾಯ ಬಳಕೆಗೆ ಆದೇಶ ನೀಡಿದ್ದಾರೆ.
ಸಿಬ್ಬಂದಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲೆಂದು ಕೇಂದ್ರ ಕಚೇರಿಯಲ್ಲಿ 5 ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಚಾಲ್ತಿಯಲ್ಲಿರುವುದು ಎರಡು ಮಾತ್ರ. ಉಳಿದ 3 ಯಂತ್ರಗಳು ಕೆಟ್ಟುಹೋಗಿವೆ.
ಇದನ್ನು ಕಂಡು ಕೆಂಡಾಮಂಡಲರಾದ ಚೀಫ್ ಕಮಿಷನರ್, ಕೂಡಲೇ ಕೆಟ್ಟುನಿಂತ ಬಯೋ ಮೆಟ್ರಿಕ್‍ಗಳನ್ನು ದುರಸ್ತಿ ಮಾಡಬೇಕು. ಒಂದು ವೇಳೆ ಕರ್ತವ್ಯಕ್ಕೆ ಬಂದು ಯಂತ್ರವನ್ನು ಬಳಕೆ ಮಾಡದಿದ್ದರೆ ಗೈರು ಎಂದು ಪರಿಗಣಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ನಿನ್ನೆಯಿಂದ ಸಿಬ್ಬಂದಿ ಬಯೋಮೆಟ್ರಿಕ್ ಯಂತ್ರವನ್ನು ಬಳಸಲಾರಂಭಿಸಿದ್ದಾರೆ.
PublicNext
17/05/2022 08:38 pm