ಯಲಹಂಕ: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದಿಂದ ಸಂಪರ್ಕ ಕಲ್ಪಿಸಲು ಸರ್ಕಾರ ಮೆಟ್ರೊ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಇದರಂಗವಾಗಿ ಹೊಸೂರು ರಸ್ತೆ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೃಷ್ಣರಾಜಪುರದವರೆಗೆ, ಮತ್ತೆ ಕೃಷ್ಣರಾಜಪುರದಿಂದ ಏರ್ ಪೋರ್ಟ್ ವರೆಗೆ ಹಂತ ಹಂತವಾಗಿ BMRCL ಕಂಪನಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.
ಇದೀಗ ಕೃಷ್ಣರಾಜಪುರದಿಂದ ಏರ್ ಪೋರ್ಟ್ ವರೆಗಿನ 37 ಕಿ.ಮೀ. ಕಾಮಗಾರಿ ಭರದಿಂದ ಸಾಗುತ್ತಿದೆ. ಇಂದು ಚಿಕ್ಕಜಾಲ ಬಳಿ ಮೊದಲ ಪಿಲ್ಲರ್ ಗೆ ಕಾಂಕ್ರೀಟ್ ಹಾಕಿ, ಏರ್ ಪೋರ್ಟ್ ರಸ್ತೆಯಲ್ಲಿ NCC ಕಂಪನಿ ಕಾಮಗಾರಿಗೆ ವೇಗ ನೀಡಿದೆ.
ಸಿಗ್ನಲ್ ಫ್ರೀ ಕಾರಿಡಾರ್ ಮೂಲಕ ಬೆಂಗಳೂರು ಸುತ್ತಮುತ್ತಲಿನ ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿ ಇಲ್ಲದೆ ಏರ್ ಪೋರ್ಟ್ ತಲುಪಲು ಸರ್ಕಾರ ಈಗಾಗಲೇ ಸಿಗ್ನಲ್ ಫ್ರೀ ರಸ್ತೆ ಸಂಚಾರ ಕಲ್ಪಿಸಿದೆ. ಹಾಗೆಯೇ, ಸಿಲ್ಕ್ ಬೋರ್ಡ್ ನಿಂದ ಕೃಷ್ಣರಾಜಪುರ ವರೆಗೂ, ಅಲ್ಲಿಂದ ಹೆಬ್ಬಾಳ, ಯಲಹಂಕ, ಚಿಕ್ಕಜಾಲ ಮಾರ್ಗವಾಗಿ 37 ಕಿ.ಮೀ. ವ್ಯಾಪ್ತಿಯ ಮೆಟ್ರೊ ಕಾಮಗಾರಿಯ ಕಾಂಟ್ರಾಕ್ಟ್ NCC ಕಂಪನಿ ಪಡೆದಿದೆ. ಈ 37 ಕಿ.ಮೀ. ಕಾಮಗಾರಿಯನ್ನು 3 ಭಾಗವಾಗಿ ವಿಂಗಡಿಸಿದೆ. ಸದ್ಯ ಚಿಕ್ಕಜಾಲದಿಂದ ಪಿಲ್ಲರ್ ಗಳಿಗೆ ಕಾಂಕ್ರೀಟ್ ಹಾಕುವ ಕೆಲಸಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ.
ಪ್ರತಿದಿನ ಬೆಂಗಳೂರು ದೇವನಹಳ್ಳಿ ಏರ್ ಪೋರ್ಟ್ ರಸ್ತೆಲಿ 20 ಸಾವಿರಕ್ಕೂ ಹೆಚ್ಚು ವಾಹನ ಏರ್ ಪೋರ್ಟ್ ಗೆ ಮಾತ್ರ ಹೋಗಿ ಬರ್ತವೆ. ಇನ್ನು ಬೆಂಗಳೂರು ಬಳ್ಳಾರಿ ರಾ.ಹೆ. ಮಾರ್ಗವಾಗಿ ದೇವನಹಳ್ಳಿ, ಚಿಕ್ಕಬಳ್ಳಾಪುರ, ಆಂಧ್ರದ ಅನಂತಪುರ, ಪುಟ್ಟಪರ್ತಿ, ಕರ್ನೂಲು , ಹೈದರಾಬಾದ್ ಗೆ ಸಾವಿರಾರು ವಾಹನ ಸಂಚರಿಸುತ್ತವೆ.
ಏನೇ ಆಗಲಿ, ಮೆಟ್ರೊ ಕಾಮಗಾರಿ ಈಗ ಪ್ರಾರಂಭವಾಗಿ ಇನ್ನೆರಡು ವರ್ಷಗಳಲ್ಲಿ ಮೆಟ್ರೊ ರೈಲು ದೇವನಹಳ್ಳಿ ಏರ್ ಪೋರ್ಟ್ ಸಂಪರ್ಕಿಸುವುದು ಪಕ್ಕಾ. ಬೆಂಗಳೂರು ಉತ್ತರ ಭಾಗಕ್ಕೆ ಮೆಟ್ರೊ ಬರುವ ಮೂಲಕ ಏರ್ ಪೋರ್ಟ್ ರಸ್ತೆಲಿ ಟ್ರಾಫಿಕ್ ಜಾಮ್ ಕಡಿಮೆಯಾಗಲಿ.
PublicNext
13/05/2022 08:16 am