ಎಕ್ಸ್ ಕ್ಲೂಸಿವ್ ವರದಿ - ಗಣೇಶ್ ಹೆಗಡೆ
ಬೆಂಗಳೂರು : ಬೆಂಗಳೂರು ಜಲ ಮಂಡಳಿಯಲ್ಲಿ ಸೂಪರ್ ನ್ಯೂಮರಿ ಹುದ್ದೆ ಸೃಷ್ಟಿ ಮಾಡಲಾಗುತ್ತಿದೆ. ಈ ಸಂಬಂಧ 53 ಮುಖ್ಯ ಇಂಜಿನಿಯರ್ ಗಳ ನೇಮಕಕ್ಕೆ BWSSB (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಸಿ ಅಂಡ್ ಆರ್ ರೂಲ್ ಬದಲಾವಣೆಗೆ ಜಲಮಂಡಳಿ ಮುಖ್ಯಸ್ಥರು ಮುಂದಾಗಿದ್ದಾರೆ.
ಸಿವಿಲ್ ಇಂಜಿನಿ ಯರ್ ಗಳನ್ನು ಪ್ರತ್ಯೇಕವಾಗಿ ಮುಖ್ಯ ಇಂಜಿನಿಯರ್ಗಳನ್ನಾಗಿ ನೇಮಕ ಮಾಡಲು ಬೆಂಗಳೂರು ಜಲ ಮಂಡಳಿಯಲ್ಲಿ ಯಾವುದೇ ನಿಯಮಾವಳಿಗಳಿಲ್ಲ. ಹೀಗಾಗಿ
ಸೂಪರ್ ನ್ಯೂಮರಿ ಹುದ್ದೆ ಸೃಷ್ಟಿ ಹಾಗೂ ನಿಯಮಾವಳಿಗೆ ಬದಲಾವಣೆ ತರುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಜಲ ಮಂಡಳಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದವರು ಮಾಡಬೇಕಾದ ಕೆಲಸವನ್ನು, ಎಲೆಕ್ಟ್ರಿಕಲ್ಸ್ ಮಾಡಿದವರಿಂದ ಮಾಡಿಸುತ್ತಿರುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ವೃಂದ ಹಳೆಯ ಸಿ ಅಂಡ್ ಆರ್ ನಿಯಮದಂತೆ ಬಡ್ತಿ ನೀಡಲಾಗು ತ್ತದೆ. ಆದರೂ ಜಲ ಮಂಡಳಿಯಲ್ಲಿ ಸಿವಿಲ್ ಇಂಜಿನಿಯರ್ ಕೆಲಸ ಸಿವಿಲ್ ಇಂಜಿನಿಯರ್ ಗಳೇ ಮಾಡಬೇಕು. ಎಲೆಕ್ಟ್ರಿಕಲ್ ಇಂಜಿನಿಯರ್ ಮಾಡಲು ಸಾಧ್ಯವಿಲ್ಲ. ನಿಯಮ ಬದಲಿಸಬೇಕಿದೆ.
ನಿಯಮಕ್ಕೆ ತಿದ್ದುಪಡಿ ಮಾಡಿದಲ್ಲಿ ಮಾತ್ರ ಮೂರೂ ವೃಂದದಲ್ಲಿ ಮುಖ್ಯ ಇಂಜಿನಿಯರ್ ನೇಮಕ ಮಾಡಲು ಸಾಧ್ಯ. ಸೂಪರ್ ನ್ಯೂಮರಿ ಹುದ್ದೆ ಸೃಷ್ಟಿ ಸೇರಿದಂತೆ ಏನೆಲ್ಲಾ ಕ್ರಮ ಸಾಧ್ಯವೋ ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
ಇದರಿಂದ ಪ್ರಧಾನ ಹಾಗೂ ಮುಖ್ಯ ಇಂಜನಿರ್ ಗಳಿಗೆ ಕೆಲಸವೇ ಇಲ್ಲ ದಂತಾಗುತ್ತದೆ. ಈಗಾಗಲೇ ಕಾವೇರಿ 5 ಹಂತದ ಕಾಮಗಾರಿ , ಎಸ್ ಟಿಪಿ ಪ್ಲಾಂಟ್ ಗಳಿಗೆ ಹಿರಿಯ ಅಧಿಕಾರಿಗಳಿಗೆ ಕೆಲಸ ಇಲ್ಲದಂತಾಗಿದೆ. ಇದರ ಮಧ್ಯೆ ಮತ್ತಷ್ಟು ಇಂಜಿನಿಯರ್ ನೇಮಕ ದಿಂದ ಕಚೇರಿಯಲ್ಲಿ ಖಾಲಿ ಕೂರಬೇಕಾಗುತ್ತದೆ ಎಂದು ಜಲಮಂಡಳಿಯ ಅಧಿಕಾರಿಗಳ ವಲಯದಲ್ಲಿ ಕೇಳಿಬರ್ತಿವೆ.
Kshetra Samachara
11/05/2022 01:44 pm