ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಶೋಕ ಲೈಲ್ಯಾಂಡ್ ಬಸ್ ಸಂಚಾರ ಸ್ಥಗಿತವಾಗಿಲ್ಲ; ಬಿಎಂಟಿಸಿ ಅಧಿಕಾರಿಗಳ ಸ್ಪಷ್ಟನೆ

ಬೆಂಗಳೂರು: ಪದೇ ಪದೇ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಹಿನ್ನೆಲೆ ಬಿಎಂಟಿಸಿ, ಅಶೋಕ್ ಲೈಲ್ಯಾಂಡ್ ಕಂಪನಿಯ 186 ಬಸ್‌ಗಳ ಸಂಚಾರ ನಿಲ್ಲಿಸಿರುವ ವರದಿ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಕೆಲ ಮಾಧ್ಯಮ ಸುಳ್ಳು ವರದಿ ಮಾಡಿವೆ ಎಂದು ಬಿಎಂಟಿಸಿ ಎಂ.ಡಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳಿನಲ್ಲಿ ಮೂರು ಬಿಎಂಟಿಸಿ ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಿಗಮ ತನಿಖೆ ಕೂಡ ಕೈಗೆತ್ತಿಕೊಂಡಿದೆ. ಆದರೆ 186 ಬಸ್‌ಗಳ ಸಂಚಾರ ಸ್ಥಗಿತ ಮಾಡಿಲ್ಲ ಎಂದು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

16/04/2022 10:31 pm

Cinque Terre

5.68 K

Cinque Terre

0

ಸಂಬಂಧಿತ ಸುದ್ದಿ