ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆವಲಹಳ್ಳಿಯಲ್ಲಿ ʼಜಿಲ್ಲಾಧಿಕಾರಿ ನಡೆ... ಹಳ್ಳಿ ಕಡೆʼ; ಹಬ್ಬದ ಸಂಭ್ರಮ, ಮೆರವಣಿಗೆ ಖುಷಿ

ಯಲಹಂಕ: ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಆವಲಹಳ್ಳಿಯಲ್ಲಿ ʼಜಿಲ್ಲಾಧಿಕಾರಿಗಳ ನಡೆ... ಹಳ್ಳಿ ಕಡೆʼಗೆ ಇಂದು ಚಾಲನೆ ನೀಡಲಾಯ್ತು. ತಹಶೀಲ್ದಾರ್ ನರಸಿಂಹಮೂರ್ತಿ, ತಾಲೂಕು ಆಡಳಿತ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಗೋಪೂಜೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು.

ಯಲಹಂಕ ದೊಡ್ಡಬಳ್ಳಾಪುರ ರಸ್ತೆಗೆ ಹೊಂದಿಕೊಂಡ ಆವಲಹಳ್ಳಿ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣವೇ ಮನೆ ಮಾಡಿತ್ತು. ಮಹಿಳೆಯರು ದೀಪ ಹೊತ್ತ ಕಳಶಗಳೊಂದಿಗೆ ಯಲಹಂಕ ತಾಲೂಕಾಡಳಿತದ ಎಲ್ಲಾ‌ ಇಲಾಖೆಗಳ ಸಿಬ್ಬಂದಿಗೆ ಮತ್ತು ಜನಪ್ರತಿನಿಧಿಗಳಿಗೆ ಕಳಶ ಸ್ವಾಗತ ಕೋರಿದರು. ಶಾಸಕರು ಟ್ರಾಕ್ಟರ್ ಓಡಿಸಿದರೆ, ಅಧಿಕಾರಿಗಳು ಟ್ರಾಕ್ಟರ್ ನಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿ, ಸಾರ್ವಜನಿಕರ ಗೌರವ ಸ್ವೀಕರಿಸಿದರು.

ಜಿಲ್ಲಾಧಿಕಾರಿಗಳ ಪರವಾಗಿ ಬೆಂಗಳೂರು ಉತ್ತರ A.C.ಶಿವಣ್ಣ, ತಹಶೀಲ್ದಾರ್ ನರಸಿಂಹಮೂರ್ತಿ, ಸಿಡಿಪಿಒ ವಿಜಯ್ ಕುಮಾರ್ ಸೇರಿದಂತೆ ತಾಲೂಕು ಆಡಳಿತದ ಎಲ್ಲಾ ಇಲಾಖೆಗಳ ಸಿಬ್ಬಂದಿ ಆವಲಹಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಜಿಲ್ಲಾಡಳಿತ ಜನರ ಕುಂದುಕೊರತೆ ಆಲಿಸಿ, ಪರಿಹಾರವನ್ನು ಸ್ಥಳದಲ್ಲೇ ಒದಗಿಸಲಿದೆ. ಪ್ರಮುಖವಾಗಿ ಯಲಹಂಕ ಮತ್ತು ಹೇಸರಘಟ್ಟ ಹೋಬಳಿ ಜನ ಆವಲಹಳ್ಳಿ ಕಾರ್ಯಕ್ರಮದಲ್ಲಿ ತಮ್ಮ ಕುಂದುಕೊರತೆ ಸಲ್ಲಿಸಲಿದ್ದಾರೆ.

SureshBabu Public Next ಯಲಹಂಕ

Edited By : Manjunath H D
Kshetra Samachara

Kshetra Samachara

19/03/2022 01:34 pm

Cinque Terre

3.93 K

Cinque Terre

0

ಸಂಬಂಧಿತ ಸುದ್ದಿ