ಬೆಂಗಳೂರು : ಫ್ರೀಡಂಪಾರ್ಕ್ ಬಳಿ ನಿರ್ಮಾಣಗೊಳ್ಳುತ್ತಿರುವ ಬಹುನಿರೀಕ್ಷಿತ ಬಹು ಮಹಡಿ ಕಟ್ಟಡ ಪಾರ್ಕಿಂಗ್ ಸಾರ್ವಜನಿಕರು ಮುಕ್ತವಾಗುವ ದಿನ ಹತ್ತಿರವಾಗಿದೆ.
79.81 ಕೋಟಿ ರೂ. ವೆಚ್ಚದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬಹು ಮಹಡಿ ಕಟ್ಟಡ ಪಾರ್ಕಿಂಗ್ ವ್ಯವಸ್ಥೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸುತ್ತಿದೆ.
556 ಕಾರು ಹಾಗೂ 445 ದ್ವಿಚಕ್ರ ನಿಲುಗಡೆ ಸ್ಥಳದ ಟೆಂಡರ್ ಬಿಬಿ ಎಂಪಿ ಕರೆದಿದೆ. ಆದರೆ ದುಬಾರಿ ಬೆಲೆಯನ್ನು ಬಿಬಿಎಂಪಿ ಹೇಳುತ್ತಿದೆ.
ಹೀಗಾಗಿ ಟೆಂಡರ್ ಪಡೆಯಲು ಖಾಸಗಿಯವರು ಹಿಂದೇಟು ಹಾಕ್ತಿರುವ ದೂರು ಕೇಳಿ ಬಂದಿದ್ದು, ಪರಿಹರಿಸುವ ಭರವಸೆಯನ್ನು ಬಿಬಿಎಂಪಿ ಅಧಿಕಾರಿಗಳು ನೀಡಿದ್ದಾರೆ.
Kshetra Samachara
04/03/2022 01:49 pm