ಆನೇಕಲ್ : ಗ್ರಾಮ ಪಂಚಾಯಿತಿ ಭಾಗದಲ್ಲಿ ಇ-ಖಾತೆ ಮಾಡಿಸಿಕೊಳ್ಳಬೇಕಾದರೆ ತಿಂಗಳಾನುಗಟ್ಟಲೆ ಅಲೆದಾಡುವ ಪರಿಸ್ಥಿತಿ ಎದುರಾಗಿತ್ತು.
ಸದ್ಯ ಈ ಸಮಸ್ಯೆ ಬಗೆಹರಿಸಲು ಬನ್ನೇರುಘಟ್ಟ ಸಮೀಪದ ಮಂಟಪ ಗ್ರಾಮ ಪಂಚಾಯಿತಿ ಸಿ ಕೆ ಪಾಳ್ಯದಲ್ಲಿ ಹಮ್ಮಿಕೊಂಡಿದ್ದ ತೆರಿಗೆ ಆಂದೋಲನದಲ್ಲಿ ಜನರಿಗೆ ಇ- ಖಾತೆ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.
ಇತ್ತೀಚಿಗೆ ಇ ಖಾತೆ ಮಾಡಿಸಿಕೊಳ್ಳವ ಸಲುವಾಗಿ ಜನಸಾಮಾನ್ಯರು ತಾಲೂಕು ಪಂಚಾಯಿತಿ ಕಚೇರಿಗಳಿಗೆ ಅಲೆಯುವಂತ್ತಾಗಿತ್ತು. ಇದನ್ನು ಮನಗೊಂಡ ಮಂಟಪ ಪಂಚಾಯಿತಿ ಪಿಡಿಓ ರಮೇಶ್ ಹಾಗೂ ಚುನಾಯಿತ ಪ್ರತಿನಿಧಿಗಳು ಪಂಚಾಯಿತಿ ವಿಶೇಷ ಸಭೆಯಲ್ಲಿ ಇ ಖಾತೆ ಬಗ್ಗೆ ಸಭೆ ನಡೆಸಿ ಬಿಲ್ ಪಾಸ್ ಮಾಡಿದರು.
ಬಳಿಕ ಮಂಟಪ ಪಂಚಾಯತಿ ಒಳಪಡುವ 18 ಹಳ್ಳಿಗಳಿಗೆ ಈ ಖಾತೆ ಮಾಡಲಿದ್ದು ಇದರ ಉಪಯೋಗ ಪಡೆದುಕೊಳ್ಳುವಂತೆ ಉಪಾಧ್ಯಕ್ಷ ಚೌಡಪ್ಪ ಮನವಿ ಮಾಡಿದ್ದಾರೆ.
ಇದೇ ರೀತಿ ಎಲ್ಲಾ ಪಂಚಾಯಿತಿಗಳಲ್ಲೂ ಇ-ಖಾತೆ ಜಾರಿಗೆ ಬಂದರೆ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
28 ಗ್ರಾಮ ಪಂಚಾಯಿತಿ ಗಳಿಗೆ ಮನೆ ಬಾಗಲಿಗೆ ಹೋಗಿ ಇ ಖಾತೆ ಮಾಡುವಂತೆ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ ಆದೇಶ ಹೊರಡಿಸಿದರೆ ಫಲಾನುಭವಿಗಳಿಗೆ ಇದರ ಅನುಕೂಲವಾಗಲಿದೆ ಎಂದರು.
Kshetra Samachara
27/02/2022 06:19 pm