ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೈನಿಕರಿಗೆ ಬೆಣ್ಣೆ ಅರೆಸೇನಾ ಪಡೆಯ ಯೋಧರಿಗೆ ಸುಣ್ಣ

ದೊಡ್ಡಬಳ್ಳಾಪುರ:ದೇಶವನ್ನು ಕಾಯುವ ಯೋಧರಿಗೆ ನೀಡುವ ಸರ್ಕಾರಿ ಸವಲತ್ತಿನಲ್ಲಿ ತಾರತಮ್ಯ ಆಗಿದೆ. ಸೈನಿಕರಿಗೆ ಸಿಗುತ್ತಿರುವ ಸರ್ಕಾರ ಸೌಲಭ್ಯಗಳು ಅರೆಸೇನಾ ಪಡೆಯ ಯೋಧರಿಗೆ ಸಿಗುತ್ತಿಲ್ಲ. ಸೈನಿಕರಿಗೂ ಸಿಗುವ ಸೌಲಭ್ಯ ಅರೆಸೇನಾ ಪಡೆಯ ಯೋಧರಿಗೂ ಸಿಗುವಂತೆ ಒತ್ತಾಯಿಸಿ ಬಹಳ ವರ್ಷಗಳಿಂದ ಮಾಜಿ ಅರೆಸೇನಾ ಪಡೆಯ ಯೋಧರು ಹೋರಾಟ ಮಾಡುತ್ತಿದ್ದಾರೆ.

ನಗರದ ರಾಜಕುಮಾರ್ ಕಲಾ ಮಂದಿರದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ಪತ್ರಿಕಾಗೋಷ್ಠಿಯನ್ನ ನಡೆಸಿತು.ಸಂಘದ ಅಧ್ಯಕ್ಷರಾದ ಹನುಮಂತರಾಜು ಮಾತನಾಡಿ, ದೇಶದಲ್ಲಿ ಅರೆಸೇನಾ ಪಡೆಯ 10.5 ಯೋಧರಿದ್ದು ದಿನದ 24 ಗಂಟೆ ವರ್ಷದ 365 ದಿನವೂ ರಕ್ಷಣೆ ಮಾಡುತ್ತಾರೆ. ಆದರೆ, ಯುದ್ಧದ ಸಮಯದಲ್ಲಿ ಬರುವ ಆರ್ಮಿ, ನೇವಿ ಮತ್ತು ಏರ್ ಪೋರ್ಸ್ ಯೋಧರಿಗೆ ಸಿಗುವ ಸರ್ಕಾರಿ ಸವಲತ್ತು ನಮಗೆ ಸಿಗುತ್ತಿಲ್ಲ ಎಂದರು.

ಆರೆ ಸೇನಾ ಪಡೆಯ ಯೋಧ ತನ್ನ ಯೌವನದ 20 ವರ್ಷಗಳನ್ನ ದೇಶಕ್ಕೆ ಕೊಡುತ್ತಾನೆ. ಅರೆ ಸೇನಾ ಪಡೆಯ ಯೋಧರು ಸಿವಿಲ್ ಪೋರ್ಸ್ ಎಂಬ ಕಾರಣಕ್ಕೆ ವರ್ಷಕ್ಕೆ ನೂರು ದಿನಗಳ ರಜೆಯನ್ನು ವಜಾ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಸಾರ್ವಜನಿಕ ಉದ್ಯಮಗಳಲ್ಲಿ ಮಾಜಿ ಅರೆಸೇನಾ ಪಡೆ ಯೋಧರಿಗೆ ಮಿಸಲಾತಿ ಕೊಡುತ್ತಿಲ್ಲ. ನಮ್ಮ ಪಡೆಗಳಿಗೆ ನಮ್ಮದೆ ಅಧಿಕಾರಿಗಳನ್ನ ಮುಖ್ಯಸ್ಥರನ್ನಾಗಿ ಮಾಡಿ ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟರು.

ಇದರ ಜೊತೆ One Rank One Pension (OROP), 2004ರ ನಂತರ ಸೇವೆಗೆ ಸೇರಿದ ಯೋಧರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೆ ಪಿಂಚಣಿ ಯೋಜನೆಯನ್ನ ಮುಂದುವರೆಸುವುದು, ಪ್ರತಿ ರಾಜ್ಯಗಳಲ್ಲೂ ಅರ್ಧ ಸೈನಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವುದು, ಅರೆ ಸೇನಾಪಡೆಗಳ ನಿವೃತ್ತ ಯೋಧರು, ಹುತಾತ್ಮ ಯೋಧರ ಕುಟುಂಬಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಕ್ಕಾಗಿ, ಪ್ರತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ CGHS ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು, CPC ಕ್ಯಾಂಟೀನ್ ಗಳಿಗೂ 50% GST ವಿನಾಯಿತಿ ನೀಡುವಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

Edited By : Nagesh Gaonkar
Kshetra Samachara

Kshetra Samachara

21/02/2022 10:33 pm

Cinque Terre

3.11 K

Cinque Terre

0

ಸಂಬಂಧಿತ ಸುದ್ದಿ