ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿರುವ ಬಡಾವಣೆಗಳ ಅಭಿವೃದ್ಧಿ ಆಮೆ ಗತಿಯಲ್ಲಿ ಸಾಗುತ್ತಿದೆ. ಇದರಿಂದ ಲಕ್ಷ ಲಕ್ಷ ಹಣವನ್ನ ಸೈಟ್ ಮೇಲೆ ಹೂಡಿಕೆ ಮಾಡಿದ ನಿವೇಶನದಾರರು ಮನೆ ಕಟ್ಟಲಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಬಡಾವಣೆ ಅಭಿವೃದ್ಧಿ ಮಾಡಲು ನಮ್ಮ ಬಳಿ ಹಣ ಇದೆ ಅಂತ ಪ್ರಾಧಿಕಾರ ಹೇಳಿದ್ರು. ಬಡಾವಣೆ ಅಭಿವೃದ್ಧಿಗೆ ರೂಪುರೇಷೆ ಸಿದ್ದಪಡಿಸಿ ಫೀಲ್ಡ್ ನಲ್ಲಿ ಕೆಲಸ ಮಾಡಲು ಪ್ರಾಧಿಕಾರದ ಬಳಿ ಇಂಜಿನಿಯರ್ಸ್ಗಳ ಕೊರತೆ ಇದೆ.
ಹೊಸ ಬಡಾವಣೆಗಳ ನಿರ್ಮಾಣ, ಒತ್ತುವರಿ ತೆರವು, ನಗರದ ಯೋಜನಾಬದ್ಧ ಬೆಳವಣಿಗೆ, ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿ, ಮೆಲ್ಸೇತುವೆಗಳು ಮತ್ತು ಬಹುಮಹಡಿ ವಾಣಿಜ್ಯ ಕಟ್ಟಡಗಳ ನಿರ್ಮಾಣ ಸೇರಿ ವಿವಿಧ ಕಾರ್ಯಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ. ಆದರೆ ಬಿಡಿಎ ಗೆ ಈಗ ಫೀಲ್ಡ್ ನಲ್ಲಿ ಕೆಲಸ ನಿರ್ವಹಿಸಲು ಎಂಜಿನಿಯರ್‌ಗಳ ಕೊರತೆ ಎದುರಾಗಿದೆ.
ಗ್ರಾಫಿಕ್ಸ್
ಬಿಡಿಎಗೆ ಇಂಜಿನಿಯರ್ಸ್ ಕೊರತೆ
ಕಾರ್ಯಪಾಲಕ ಇಂಜಿನಿಯರ್
ಮಂಜೂರಾಗಿರುವುದು 10, ಪ್ರಸ್ತುತ ಸೇವೆ ಸಲ್ಲಿಸುತ್ತಿರುವುದು 7, ಕೊರತೆ 3
ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಮಂಜೂರಾಗಿರುವುದು 35, ಪ್ರಸ್ತುತ ಸೇವೆ ಸಲ್ಲಿಸುತ್ತಿರುವುದು 27, ಕೊರತೆ 7
ಕಿರಿಯ ಇಂಜಿನಿಯರ್
ಮಂಜೂರಾಗಿರುವುದು 70, ಪ್ರಸ್ತುತ ಸೇವೆ ಸಲ್ಲಬರುತ್ತಿರುವುದು 33, ಕೊರತೆ 37
ಕೊರತೆ ಇರುವ ಇಂಜಿನಿಯರ್‌ಗಳು
ಮಂಜೂರಾಗಿರುವುದು 115, ಪ್ರಸ್ತುತ ಸೇವೆ ಸಲ್ಲಿಸುತ್ತಿರುವುದು 67, ಕೊರತೆ 47
ನಗರದಲ್ಲಿ ಪ್ರಾಧಿಕಾರದ ಯೋಜನೆಗಳನ್ನು ಸಮಪರ್ಕವಾಗಿ ನಿರ್ವಹಣೆ ಮಾಡಲು ಇನ್ನು 50 ಇಂಜಿನಿಯರ್‌ಳನ್ನು ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಲವು ತಿಂಗಳುಗಳೆ ಕಳೆದಿವೆ. ಆದರೆ ಸರ್ಕಾರ ನಿಯೋಜನೆ ಮಾಡಲು ಲೋಕೊಪಯೋಗಿ ಇಲಾಖೆಯಲ್ಲಿ 2017 ರಿಂದ ನೇಮಕಾತಿ ನಡೆದಿಲ್ಲ. 2017 ರಲ್ಲಿನ ನೇಮಕಾತಿ ಪ್ರಕ್ರಿಯೆ ನ್ಯಾಯಾಲಯದಲ್ಲಿದೆ. ವಾರ್ಷಿಕ 200 ಇಂಜಿನಿಯರ್ಸ್ ನಿವೃತ್ತಿ ಆಗುತ್ತಿದ್ದರು. 5 ವರ್ಷಗಳಲ್ಲಿ ಯಾವುದೆ ನೇಮಕಾತಿ ನಡೆದಿಲ್ಲ. ಹೀಗಾಗಿ ಮೂಲ ಇಲಾಖೆಯಲ್ಲೇ ಇಂಜಿನಿಯರ್‌ಗಳ ಕೊರತೆ ಇರುವುದರಿಂದ ಸರ್ಕಾರ,ಬಿಡಿಎಗೆ ನಿಯೋಜನೆ ಮಾಡಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.
Kshetra Samachara
19/02/2022 04:32 pm