ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಸಲವೂ ಫಲಪುಷ್ಪ ಪ್ರದರ್ಶನ ನಡೆಯೋದು ಅನುಮಾನ

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ 2022 ರ ಜನವರಿಯಲ್ಲಿ ಲಾಲ್ ಬಾಗ್ ಗಾಜಿನ ಮನೆಯಲ್ಲಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನದ‌ ಮೇಲೆ ಕೊರೊನಾ ಕರಿ‌ನೆರಳು ಬಿದ್ದಿದೆ.

ಹೆಚ್ಚುತ್ತಿರುವ ಕೋವಿಡ್‌ ಸೋಂಕಿನ ಪರಿಣಾಮ ರಾಜ್ಯ ಸರ್ಕಾರ 500 ಮಂದಿ ಸೇರುವಂತಿಲ್ಲ ಎಂಬ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಅಡ್ಡಿ ಯಾಗುವ ಸಾಧ್ಯತೆಗಳಿವೆ.

ಇನ್ನೂ ಈ ಬಗ್ಗೆ ತೋಟಗಾರಿಕೆ ಇಲಾಖೆಯ ಡೈರೆಕ್ಟರ್ ನಾಗೇಂದ್ರ ಪ್ರಸಾದ್ ರವರು ಪ್ರತಿಕ್ರಿಯೆಗೆ ನಿರಾಕರಿಸಿದರು.

ಮೂಲಗಳ ಪ್ರಕಾರ ಇನ್ನೂ ಯಾವುದೇ ಸಿದ್ಧತೆ ಪ್ರಾರಂಭ ಆಗದ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನ ಲಾಲ್ ಬಾಗ್ ನಲ್ಲಿ ಈ ಸಲ ನಡೆ ಯುವುದು ಅನುಮಾನವಾಗಿದೆ.

Edited By :
PublicNext

PublicNext

07/01/2022 01:37 pm

Cinque Terre

13.11 K

Cinque Terre

0

ಸಂಬಂಧಿತ ಸುದ್ದಿ